Advertisement

ಫ್ರಾನ್ಸ್‌ : ತಿಂಗಳ ಅನಂತರ ಭಾರೀ ಇಳಿಕೆ

04:13 PM May 04, 2020 | Team Udayavani |

ವೈರಸ್‌ ಎದುರು ಸೆಣಸಲು ಲಾಕ್‌ಡೌನ್‌ ಒಂದೇ ಅತ್ಯಂತ ಪರಿಣಾಮಕಾರಿ ತಂತ್ರ ಎಂದು ನಂಬಿದ್ದ ಫ್ರಾನ್ಸ್‌ನಲ್ಲಿ ಲಾಕ್‌ಡೌನ್‌ ನಿಯಮಗಳು ಫ‌ಲ ಕೊಟ್ಟಂತಿದೆ. ಕಳೆದ ಒಂದೂವರೆ ತಿಂಗಳ ನಂತರ ಮೊದಲ ಬಾರಿಗೆ ದೇಶದಲ್ಲಿ ಮರಣ ಪ್ರಮಾಣದಲ್ಲಿ ಗಣನೀಯವಾಗಿ ಕಡಿತವಾಗಿದೆ. ಇದರಿಂದ ದೇಶದಲ್ಲಿ ನೆಮ್ಮದಿಯ ವಾತಾವರಣ ನೆಲೆಸಿದೆ. ಯುರೋಪ್‌ ರಾಷ್ಟ್ರಗಳ ಪೈಕಿ ಅತೀ ಹೆಚ್ಚು ಸಾವು ನೋವು ಅನುಭವಿಸಿದ ನಾಲ್ಕನೇ ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಫ್ರಾನ್ಸ್‌ನಲ್ಲಿ ಸೋಂಕಿಗೆ ಬಲಿಯಾಗುವವರ ಸಂಖ್ಯೆಯಲ್ಲಿ ಇಳಿಕೆ ಯಾಗಿದ್ದು, ಶುಕ್ರವಾರ ಕೇವಲ 218 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ಪ್ರಾರಂಭವಾದಾಗಿನಿಂದ ಎರಡನೇ ಬಾರಿ ದಾಖಲಾದ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ಎಪ್ರಿಲ್‌ 9 ರಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ರೋಗಿಗಳು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ 141 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಆ ಮೂಲಕ ತೀವ್ರ ನಿಗಾ ಘಟಕಗಳಲ್ಲಿರುವ ಸೋಂಕಿತರ ಪ್ರಮಾಣವು ಇಳಿಕೆ ಯಾಗಿದೆ ಎಂದು ಉನ್ನತ ಆರೋಗ್ಯ ಅಧಿಕಾರಿ ಜೆರೋಮ್‌ ಸಾಲೋಮನ್‌ ಹೇಳಿದ್ದಾರೆ. ಮಾರ್ಚ್‌ 23 ರಂದು ದೇಶದಲ್ಲಿ 186 ಮಂದಿಗೆ ಬಲಿಯಾಗಿದ್ದು, ಅದಾದ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಪ್ರಕರಣಗಳು ವರದಿಯಾಗಿರುವುದು ಆಶಾದಾಯಕ ಬೆಳವಣಿಗೆಯನ್ನು ಸೂಚಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವತ್ತಲೂ ಫ್ರಾನ್ಸ್‌ ಸರಕಾರ ಹೆಚ್ಚು ಗಮನ ಹರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next