Advertisement

ಕೋವಿಡ್-19 ಸೋಂಕಿಗೆ ಬೀದರ್ ನಲ್ಲಿ ಮೊದಲ ಬಲಿ: ರಾಜ್ಯದಲ್ಲಿ 25ನೇ ಬಲಿ ಪಡೆದ ಸೋಂಕು

08:16 AM May 03, 2020 | keerthan |

ಬೀದರ್: ಮಹಾಮಾರಿ ಕೊವಿಡ್-19 ಸೋಂಕಿಗೆ ಗಡಿ ಜಿಲ್ಲೆ ಬೀದರ್ ನಲ್ಲಿ ಮೊದಲ ಬಲಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ 10 ದಿನಗಳಿಂದ ಜಿಲ್ಕೆಯಲ್ಲಿ ಯಾವುದೇ ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣ ವರದಿಯಾಗದ ಹಿನ್ನಲೆಯಲ್ಲಿ ಕೊಂಚ ನಿರಾಳರಾಗಿದ್ದ ಬೀದರ್ ಜನರಲ್ಲಿ ಈ ಸಾವು ಪ್ರಕರಣದಿಂದ ಆತಂಕ ಹೆಚ್ಚಿಸಿದೆ.

Advertisement

ಬೀದರ್ ನ ನಿವಾಸಿಯಾಗಿರುವ 82 ವರ್ಷದ 590ನೇ ಸಂಖ್ಯೆಯ ರೋಗಿ ಕೋವಿಡ್-19 ವೈರಸ್ ನಿಂದ ಮೃತಪಟ್ಟಿರುವ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ.

ಏ. 27ರಂದು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿ ಏ. 28 ರಂದು ಸಾವನಪ್ಪಿದ್ದಾನೆ. ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಒಳಪಡಿಸಲಾಗಿದ್ದು, ಶನಿವಾರ ವರದಿ ಬಂದಿದೆ. ವೃದ್ಧ ಕೊವಿಡ್-19 ಸೋಂಕಿನಿಂದಲೇ ಮೃತಪಟ್ಟಿರುವುದು ಖಚಿತವಾಗಿದೆ.

ಈ ಹೊಸ ಪ್ರಕರಣದೊಂದಿಗೆ ಬೀದರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16 ಆದಂತಾಗಿದೆ. ಅದರಲ್ಲಿ 11 ಜನರು ಗುಣಮುಖರಾಗಿರುವುದರಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇನ್ನೂ 4 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next