ಸಿದ್ದಾಪುರ: ಜನರು ಕೋವಿಡ್ ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸಬೇಕು. ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಸ್ಕ್ ಧರಿಸಬೇಕು. ಅನವಶ್ಯವಾಗಿ ಸುತ್ತಾಡದೇ ಮನೆಗಳಲ್ಲಿ ವಾಸಿಸಬೇಕು. ವಾಹನ ಸವಾರರು ಅವಶ್ಯ ಕಾರ್ಯಗಳಿಗಾಗಿ ಮಾತ್ರ ಸಂಚರಿಸಬೇಕು.
ದಿನಸಿ, ತರಕಾರಿ, ಹಾಲಿನ ಡೈರಿ, ಮೆಡಿಕಲ್ ಶಾಪ್‌ಗ್ಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನಾರೋಗ್ಯ ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಅಮಾಸೆಬೈಲು ಪೊಲೀಸ್ ಠಾಣೆ ಉಪ ನಿರೀಕ್ಷಕ ಅನೀಲ್‌ಕುಮಾರ್ ಹೇಳಿದರು.
ಅವರು ಹೊಸಂಗಡಿ ಗ್ರಾಮದ ಕಾರೂರು ದಲಿತರ ಕೇರಿಯಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಮಾಹಿತಿಯ ಬಗ್ಗೆ ಮಾತನಾಡಿದರು.
ಸರಕಾರ ಲಾಕ್‌ಡೌನ್ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಕಾನೂನು ಜಾರಿಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜನರ ಸಹಕಾರ ಅಗತ್ಯವಿದೆ.
ದಿನಸಿ, ತರಕಾರಿ, ಹಾಲು, ಮೆಡಿಕಲ್ ಶಾಪ್‌ಗ್ಳಲ್ಲಿ ಔಷಧಿ ಪಡೆಯಲು ಸೂಕ್ತ ವ್ಯವಸ್ಥೆಯಿದೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಪೊಲೀಸ್ ಇಲಾಖೆಯೊಂದಿಗೆ ಸಲಹೆಗಳನ್ನು ಪಡೆದುಕೊಳ್ಳಬಹುವುದು ಎಂದು ಅವರು ಹೇಳಿದರು.