ನವದೆಹಲಿ: ಕೋವಿಡ್ 19 ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹರ್ಯಾಣದ ಫರಿದಾಬಾದ್ ನಲ್ಲಿ ಗಡಿಭಾಗಗಳನ್ನು ಸೀಲ್ಡ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಏಪ್ರಿಲ್ 28ರಿಂದ ಫರಿದಾಬಾದ್ ಬಾರ್ಡರ್ ಅನ್ನು ಬಂದ್ ಮಾಡುವಂತೆ ಉಪ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಬ್ಯಾಂಕ್ ನೌಕರರಿಗೆ ಫರಿದಾಬಾದ್ ಗಡಿಯಲ್ಲಿ ಗುರುತಿನ ಕಾರ್ಡ್ ಅನ್ನು ತೋರಿಸುವ ಮೂಲಕ ಒಳಹೋಗಲು ಬಿಡುತ್ತಿರುವುದಾಗಿ ವರದಿ ವಿವರಿಸಿದೆ.
ಏಪ್ರಿಲ್ 29ರ ಮಧ್ಯಾಹ್ನ 12ಗಂಟೆ ನಂತರ ಪೊಲೀಸ್ ಸಿಬ್ಬಂದಿಗಳಿಗೂ ಕೂಡಾ ಫರಿದಾಬಾದ್ ಗಡಿಯನ್ನು ದಾಟಲು ಸಾಧ್ಯವಾಗಿಲ್ಲ. ಕೇವಲ ಪಾಸ್ ಹೊಂದಿರುವವರಿಗೆ ಮಾತ್ರ ಒಳಬರಲು ಅವಕಾಶ ನೀಡಲಾಗುತ್ತಿತ್ತು. ಮೇ 3ರವರೆಗೆ ಬಾರ್ಡರ್ ಬಂದ್ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ 31,322ಕ್ಕೆ ಏರಿಕೆಯಾಗಿದ್ದು, 7696 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ 19 ಸೋಂಕಿಗೆ ಈವರೆಗೆ 1007 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಡಾಟಾ ತಿಳಿಸಿದೆ.
ಕೋವಿಡ್ 19, ಹರ್ಯಾಣ, ಫರಿದಾಬಾದ್ ಗಡಿ ಸೀಲ್ಡ್, ಲಾಕ್ ಡೌನ್, Covid19, Haryana, Faridabad,
Border seal, Lockdown, Udayavani kannada news