Advertisement
ವಿಪರ್ಯಾಸ ಎಂದರೆ ಚಿಲ್ಲರೆ ಮಾರುಕಟ್ಟೆ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳತ್ತ ಕಣ್ಣು ಹಾಯಿಸದ ಕೆಲ ದೇಶಗಳು ಇಡೀ ಕ್ಷೇತ್ರವನ್ನು ಮರೆತಂತಿದೆ. ಇದಕ್ಕೆ ಅಮೆರಿಕವೂ ಹೊರತಾಗಿಲ್ಲ. ಲಾಕ್‌ಡೌನ್ ಜಾರಿಯಾದಾಗಿನಿಂದ ಇಲ್ಲಿನ ಚಿಲ್ಲರೆ ಮಾರುಕಟ್ಟೆ ಸಂಕಷ್ಟಕ್ಕೆ ಸಿಲುಕಿದ್ದು, ರಾಷ್ಟ್ರೀಯ ಚಿಲ್ಲರೆ ಒಕ್ಕೂಟವು (ಎನ್‌ಆರ್‌ಎಫ್) ನೆರವು ಕೋರಿ ಸಾಕಷ್ಟು ಬಾರಿ ಸರಕಾರದ ಎದುರು ಸಹಾಯ ಹಸ್ತ ಚಾಚಿದೆ. ಆದರೆ ಮನವಿಗೆ ಸರಕಾರ ಸ್ಪಂದಿಸಿಲ್ಲ.
ಚಿಲ್ಲರೆ ಉದ್ಯಮವು ಖಾಸಗಿ ವಲಯದ ಅತಿದೊಡ್ಡ ಉದ್ಯೋಗದಾತ ಕ್ಷೇತ್ರವಾಗಿದ್ದು, 29 ದಶಲಕ್ಷ ಜನರಿಗೆ ಕೆಲಸವನ್ನು ಒದಗಿಸುತ್ತದೆ ಎಂದು ಎನ್‌ಆರ್‌ಎಫ್ ಹೇಳಿದ್ದು, ಇದು ಯು.ಎಸ್. ಆರ್ಥಿಕತೆಯ ಬೆಳವಣಿಗೆಗೆ ಪ್ರಮುಖ ಆದಾಯ ಮೂಲವಾಗಿದೆ. ಗ್ರಾಹಕರಿಗೆ ಅನಿಲ ಪೂರೈಕೆ, ವಸ್ತ್ರ ಸೇರಿದಂತೆ ಮತ್ತಿತ್ತರ ದಿನನಿತ್ಯದ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವಲ್ಲಿ ಇದರ ಪಾತ್ರ ಅಗಾಧ. ಆದರೆ ಇದೀಗ ಈ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ಉದ್ಯೋಗ ನಷ್ಟ ಭೀತಿ ಎದುರಿಸುತ್ತಿದೆ ಎನ್ನುತ್ತಿದೆ ಸಿಎನ್‌ಬಿಸಿ. ಯೋಜನೆ ಪಡೆಯಲು ಅನರ್ಹರು
ಅನೇಕ ಮಧ್ಯಮ ಗಾತ್ರದ ಚಿಲ್ಲರೆ ವ್ಯಾಪಾರಿಗಳು ಸರಕಾರ ಘೋಷಿಸಿರುವ ಯಾವುದೇ ಆರ್ಥಿಕ ನೆರವು ಯೋಜನೆಗಳ ಸೌಲಭ್ಯಗಳಿಗೆ ಅರ್ಹರಲ್ಲ ಎನ್ನಲಾಗುತ್ತಿದ್ದು, ದೊಡ್ಡ ದೊಡ್ಡ ಕಂಪನಿಗಳ ನಷ್ಟವನ್ನು ಸರಿದೂಗಿಸಲು ಸರಕಾರ ಹೆಚ್ಚಿನ ಒಲವು ತೋರಿಸುತ್ತಿದೆ ಎಂಬುದು ಕೇಳಿಬರುತ್ತಿರುವ ಆರೋಪ.
Related Articles
ರಿಟೇಲರ್ಸ್ ಅಸೋಸಿಯೇಶನ್ ಸದ್ಯ ಜಾರಿಯಾಗಿರುವ ಯೋಜನೆಯನ್ನು ಮರು ಮಾರ್ಪಾಡು ಮಾಡುವಂತೆ ಒತ್ತಾಯಿಸಿದೆ. ಒಂದು ವೇಳೆ ಆರ್ಥಿಕ ನೆರವು ಸಿಗದಿದ್ದರೆ ಸಾವಿರಾರು ಜನ ಉದ್ಯೋಗ ಕಳೆದುಕೊಂಡು ಅತಂತ್ರರಾಗುತ್ತಾರೆ ಎನ್ನುತ್ತದೆ ಒಕ್ಕೂಟ.
ಎಲ್ಲ ಕ್ಷೇತ್ರಕ್ಕೂ ಅನ್ವಯವಾಗುವಂತೆ ಚಿಲ್ಲರೆ ಮಾರುಕಟ್ಟೆ ಉದ್ಯಮಕ್ಕೂ ಹಣಕಾಸಿನ ನೆರವು ಸಿಗಬೇಕು. ಇಲ್ಲದಿದ್ದರೇ ಆರ್ಥಿಕ ಕ್ಷೇತ್ರದ ಪ್ರಮುಖ ವಲಯವಾದ ಈ ಕ್ಷೇತ್ರ, ವ್ಯಾಪಾರಿಗಳು ಮತ್ತು ಕಾರ್ಮಿಕರ ಮೇಲೆ ಸದ್ಯ ಎದುರಾಗಿರುವ ಸೋಂಕು ಬಿಕ್ಕಟ್ಟು ದೀರ್ಘಕಾಲೀನ ಪರಿಣಾಮಗಳನ್ನು ಬೀರಲಿದೆ ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯ.
Advertisement