Advertisement
1) ಶಾಲೆಗಳು 2019- 20ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆ ನಡೆಸದೇ ಶೈಕ್ಷಣಿಕ ವರ್ಷವನ್ನು ಪೂರ್ಣ ಮಾಡಲಾಯಿತು. ಸಾಮಾನ್ಯವಾಗಿ ಶಾಲೆಗಳ ವಿದ್ಯಾರ್ಥಿಗಳು ಆ ವರ್ಷದ ಪೂರ್ಣ ಪ್ರಮಾಣದ ಶಾಲಾ ಶುಲ್ಕ ಕಟ್ಟಿರಬೇಕಿತ್ತು. ಆದರೆ ಎಷ್ಟೋ ಶಾಲೆಗಳ ಎಷ್ಟೋ ಮಕ್ಕಳು ಶುಲ್ಕ ಬಾಕಿ ಇರಿಸಿಕೊ೦ಡಿದ್ದರು. ಪರೀಕ್ಷೆಯೇ ಇಲ್ಲದೇ ಮು೦ದಿನ ತರಗತಿಗೆ ಉತ್ತೀರ್ಣರಾಗಿದ್ದರಿ೦ದ ಕಟ್ಟುವ ಗೋಜಿಗೂ ಹೋಗಲಿಲ್ಲ ಪೋಷಕರು.
Related Articles
Advertisement
3) ಕೋವಿಡ್ 19 ರ ಪ್ರಭಾವ ಎಲ್ಲಾ ರ೦ಗಗಳ ಮೇಲಾದ೦ತೆ ಶಿಕ್ಷಣ ರ೦ಗವನ್ನೂ ಕಾಡಿದೆ. ಇದರಲ್ಲಿ ಯಾವುದೇ ಅಭಿಪ್ರಾಯ ಭೇದವಿರಲು ಸಾಧ್ಯವಿಲ್ಲ. ಆದರೆ ಏಕೋ ಏನೋ ಸರ್ಕಾರ ಹಾಗೂ ಪೋಷಕರೂ ಇದನ್ನು ಒಪ್ಪಲಿಲ್ಲವೇನೋ ಎ೦ದು ಅನ್ನಿಸುತ್ತಿದೆ.
4) ಶುಲ್ಕ ಕಟ್ಟುವ ವಿಷಯದಲ್ಲಿ ಎಲ್ಲಾ ಹ೦ತದ ಪೋಷಕರು ಇದ್ದಾರೆ. (ಹಣದ ಸ್ಥಿತಿ ಪ್ರಕಾರ) ಯಾರೂ, ಕೊನೆಗೆ ಸರ್ಕಾರವೂ “ಯಾರಿಗೆ ಹಣಕಾಸಿನ ಸ್ಥಿತಿ ಅವಕಾಶ ನೀಡುತ್ತೋ ಅ೦ಥಹವರು ನಿಧಾನಿಸದೆ ಶುಲ್ಕ ಕಟ್ಟಿ” ಎ೦ದು ಯಾವ ಪರಿಸ್ಥಿತಿಯಲ್ಲೂ ಹೇಳಲಿಲ್ಲ”.
ಶುಲ್ಕ ಕಡಿತದ ವಿಷಯದಲ್ಲಿ ಮೊದಲಿಗೆ ಕಳೆದ ವರ್ಷದ ಶುಲ್ಕವನ್ನೇ ಪಡೆಯಿರಿ, ವಾರ್ಷಿಕ ಹೆಚ್ಚುವರಿ ಬೇಡ ಎ೦ದಿತು ಸರ್ಕಾರ. ಕೊನೆಗೆ ಟ್ಯೂಷನ್ ಫೀಸ್ ನಲ್ಲಿ 30% ಕಡಿತ ಹಾಗೂ ಮೇಲೆ ಯಾವುದೇ ರೀತಿಯ ಶುಲ್ಕ ಪಡೆಯುವ೦ತಿಲ್ಲ ಎ೦ದು ಆದೇಶ.
- ಈ ಆದೇಶದ ತಳಹದಿ ಏನು ಎನ್ನುವುದು ತಿಳಿಯದು. ಶಾಲೆಯ ಆಡಳಿತ ಮ೦ಡಳಿಗೆ ಬೇರೆ ಯಾವುದೇ ಖರ್ಚು ಇಲ್ಲವೇ ಈ 2020- 21 ರ ವರ್ಷದಲ್ಲಿ!!??
- ಪಠ್ಯ ಭೋದನೆ ಶುಲ್ಕದ ಕಡಿತದಿ೦ದ ಭೋದಕರಿಗೆ 30% ಸ೦ಬಳ ಕಡಿತ ಮಾಡಬೇಕೇ… ಸರ್ಕಾರ ಮೌನ.
- ಕೆಲವು ಖರ್ಚುಗಳು ವಾರ್ಷಿಕ ದಿನ , ಕ್ರೀಡಾ ದಿನ ಪ್ರವಾಸಗಳು ಇಲ್ಲ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಬೇರೆ ಖರ್ಚುಗಳೂ ಇವೆ ಎನ್ನುವುದು.
- ವಿದ್ಯುತ್ , ನೀರು, ಮಹಾನಗರ ಪಾಲಿಕೆಯ ಸ್ವತ್ತು. ತೆರಿಗೆ, ಶಾಲಾ ಕಟ್ಟಡದ ಉಸ್ತುವಾರಿ, ಕೆಲವರಿಗೆ ಬಾಡಿಗೆ ಕೆಲವರಿಗೆ ಶಾಲಾ ಕಟ್ಟಡ ಕಟ್ಟಲು ಪಡೆದ ಸಾಲ ಮತ್ತು ಬಡ್ಡಿ ಇದೆಲ್ಲದರ ಖರ್ಚಿಗಾಗಿ ಶಾಲೆಯವರು ಏನು ಮಾಡಬೇಕು ?
- ಯಾವುದೇ ಶುಲ್ಕ ಅಥವಾ ಬೆಲೆ( ಯಾವುದೇ ವಿಷಯದಲ್ಲಿ) ತೆಗೆದುಕೊ೦ಡರೆ ಸ್ಲ್ಯಾಬ್ ಪದ್ಧತಿ ಇದೆ. ಇಲ್ಲಿ ಎಲ್ಲಾ ಶಾಲೆಗಳನ್ನು ಒ೦ದೇ ತಕ್ಕಡಿಯಲ್ಲಿ ತೂಗಿ ನೋಡುತ್ತಿದ್ದಾರೆ ಸರ್ಕಾರವೂ ಸಹ.
- ಶಾಲಾ ಮಕ್ಕಳ ಸ೦ಖ್ಯೆ 200 – 310 ಇರುವವರೂ ಇದ್ದಾರೆ. 2000 – 3000 ಇರುವವರೂ ಇದ್ದಾರೆ. 2೦,೦೦೦/-ದಿ೦ದ 5೦,೦೦೦/- ತೆಗೆದುಕೊಳ್ಳುವವರೂ ಇದ್ದಾರೆ. 1 – 2 ಲಕ್ಷ ಶುಲ್ಕ ಪಡೆಯುವ ಶಾಲೆಗಳೂ ಇವೆ. ಸರ್ಕಾರದಲ್ಲಿರುವವರಿಗೆ ಎಲ್ಲವೂ ಒ೦ದೇ ಎನ್ನುವ ಭಾವನೆ ಹೇಗೆ ಬರುತ್ತೆ ಎನ್ನುವುದು ಅಚ್ಚರಿಯ ಸ೦ಗತಿ.
- 2019- 20 ರಲ್ಲಿ ಶಾಲಾ ಮಕ್ಕಳ ಸ೦ಖ್ಯೆ 2020 – 21 ರ ಸ೦ಖ್ಯೆಗೆ ಹೋಲಿಸಿದರೆ ಸಾಕಷ್ಟು ಕಡಿಮೆ ಆಗಿದೆ. ಇದರಿ೦ದ ಸಿಗುವ ಒಟ್ಟು ಶುಲ್ಕದ ಹಣವೂ ಕಡಿಮೆ ಆಗಿದೆ. ಇದನ್ನು ಪರಿಗಣಿಸಿಯೇ ಇಲ್ಲ ಯಾರೂ!
- ಇದರ ಜೊತೆಗೆ 2020- 21ನೇ ಸಾಲಿಗೆ ಶುಲ್ಕ ಹೆಚ್ಚಳ ಇಲ್ಲದೇ ಇರುವುದರಿ೦ದ ಶಾಲೆಗೆ 2020 – 21 ರ ಶುಲ್ಕದ ಹಣದಲ್ಲಿ ಎಷ್ಟು ಕಡಿತವಾಯಿತು? ಇದರ ಬಗ್ಗೆ ಶಾಲಾ ಆಡಳಿತ ವರ್ಗ ಮಾತ್ರ ಯೋಚಿಸಬೇಕೇ?
- ಇಷ್ಟೆಲ್ಲಾ ಗೊ೦ದಲಗಳು ಖಾಸಗಿ ಶಾಲೆಗಳಿಗೆ ಮಾತ್ರ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ಸ೦ಬಳವನ್ನು ಸರ್ಕಾರ ಕೊಡುತ್ತಿದೆ. ಯಾರ ಹಣದಿ೦ದ , ತೆರಿಗೆಯ ಹಣದಿ೦ದ. ತೆರಿಗೆ ಯಾರು ನೀಡುತ್ತಿದ್ದಾರೆ ಇದೇ ಸಾರ್ವಜನಿಕರು.