Advertisement

ಹೆಚ್ಚುತ್ತಿರುವ ಕೋವಿಡ್‌ ಸೋಂಕು : ಇರಾನ್‌ನಲ್ಲಿ ಮತ್ತೆ ಲಾಕ್‌ಡೌನ್‌ ?

12:11 PM Jun 07, 2020 | sudhir |

ಟೆಹ್ರಾನ್‌: ಕೋವಿಡ್‌ ಆತಂಕ ಇರಾನ್‌ನಿಂದ ದೂರವಾಯಿತು ಎನ್ನುತ್ತಿರುವಾಗಲೇ ಮತ್ತೆ ಅಲ್ಲೀಗ ಕೋವಿಡ್‌ ಪೀಡಿತರ ಸಂಖ್ಯೆ ಏರುತ್ತಿದ್ದು ಹೊಸ ತಲೆನೋವು ಸೃಷ್ಟಿಸಿದೆ.

Advertisement

ಜೂ.1ರ ಬಳಿಕ ಇರಾನ್‌ನಲ್ಲಿ ಹೊಸ ಕೋವಿಡ್‌ ಪೀಡಿತರ ಸಂಖ್ಯೆ 3 ಸಾವಿರಕ್ಕೂ ಹೆಚ್ಚಾಗಿದೆ. ಗುರುವಾರದ ಪ್ರಕರಣಗಳ ಸಂಖ್ಯೆ 3574 ಆಗಿತ್ತು.

ಜನರ ಡೋಂಟ್‌ ಕೇರ್‌
ಇನ್ನು ಇರಾನ್‌ನ ಹಲವೆಡೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಯಾಗಿದ್ದು, ಇದರಿಂದ ಜನರು ಸುರಕ್ಷತೆ ನಿಯಮಗಳನ್ನು ಪಾಲಿಸುವುದು ಶೇ.90ರಿಂದ ಶೇ.40ರಷ್ಟಕ್ಕೆ ಇಳಿಕೆಯಾಗಿದೆ. ಅಲ್ಲದೇ ಮನೆಯಲ್ಲೇ ಇರಬೇಕೆನ್ನುವ ನಿಯಮವನ್ನು ಮೀರಿ ಹೊರಬರುವವರ ಸಂಖ್ಯೆ ಶೇ.86ರಿಂದ ಶೇ.32ರಷ್ಟಕ್ಕೆ ಇಳಿದಿದೆ ಎಂದು ಇರಾನ್‌ನ ಉಪ ಆರೋಗ್ಯ ಸಚಿವ ಇರಾಜ್‌ ಹೈರಿಚಿ ಹೇಳಿದ್ದಾರೆ.

ಅಲ್ಲಿ ಅಧಿಕಾರಿಗಳೇ ಸುರಕ್ಷಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಮಾತು ಗಳಿವೆ. ಜನರೂ ಕೋವಿಡ್‌ ವೈರಸ್‌ ಹೋಯಿತು ಎಂಬ ರೀತಿಯ ಧೋರಣೆ ಯಲ್ಲಿ ದಾರೆ ಎಂದು ಆರೋಗ್ಯ ಸಚಿವ ಸಯೀದ್‌ ನಮಕಿ ಆತಂಕ ವ್ಯಕ್ತಪಡಿಸುತ್ತಾರೆ. ಆದರೆ ಕೋವಿಡ್‌ ಹಾವಳಿ ಇನ್ನೂ ದೂರವಾಗಿಲ್ಲ. ಮತ್ತೆ ಅದು ಬಂದರೆ ಹಿಂದೆಂದಿಗಿಂತಲೂ ಭೀಕರವಾಗಿರಲಿದೆ ಎಂದವರು ಎಚ್ಚರಿಸಿದ್ದಾರೆ.

ಎಚ್ಚರಿಕೆ
ಏತನ್ಮಧ್ಯೆ ಸುರಕ್ಷತೆ ನಿಯಮಗಳನ್ನು ಪಾಲಿಸುವುದು ಕಡಿಮೆಯಾದ ಹಿನ್ನೆಲೆಯಲ್ಲಿ ಅಲ್ಲಿ ಲಾಕ್‌ಡೌನ್‌ ರೀತಿಯ ಕ್ರಮ ಮರು ಜಾರಿಯಾಗುವ ಸಾಧ್ಯತೆ ಹೆಚ್ಚಿವೆ. ಇರಾನ್‌ ಅಧ್ಯಕ್ಷ ಹಸ್ಸನ್‌ ರೌಹಾನಿ ಈ ವಿಚಾರವನ್ನು ಅತಿ ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಜನರು ಸೂಕ್ತವಾಗಿ ಸ್ಪಂದಿಸದಿದ್ದರೆ, ವಿವಿಧ ನಿರ್ಬಂಧಗಳನ್ನು ಹಾಕಲು ಅಧಿಕಾರ ವರ್ಗಕ್ಕೆ ಸೂಚಿಸುವುದಾಗಿ ಹೇಳಿದ್ದಾರೆ.

Advertisement

ಸಂಪೂರ್ಣ ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹಾನಿಯಾಗುವುದಾಗಿ ಮತ್ತೆ ಎಲ್ಲವನ್ನೂ ತೆರೆದುಕೊಂಡರೂ, ಕೆಲವು ಜನರ ವರ್ತನೆಗಳಿಂದಾಗಿ ಮತ್ತೆ ಕೋವಿಡ್‌ ಹರಡುವಂತಾಗಿದೆ ಎಂದು ಇಲ್ಲಿನ ಜನರು ದೂರುತ್ತಿದ್ದಾರೆ. ಇನ್ನು ಮೇ 12ರಂದು ಇರಾನ್‌ನಲ್ಲಿ ಎಲ್ಲ ಮಸೀದಿಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿತ್ತು. ಅಲ್ಲದೇ ರಮ್ಜಾನ್‌ ಆಚರಣೆ, ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿತ್ತು. ಇದಾದ ಬಳಿಕ ಮೇ 25ರಿಂದ ಜೂ.1ರ ಅವಧಿಯಲ್ಲಿ ನಿತ್ಯವೂ ಪತ್ತೆಯಾಗುತ್ತಿದ್ದ ಕೋವಿಡ್‌ ಪ್ರಕರಣಗಳು 338ರಿಂದ 652ಕ್ಕೆ ಏರಿಕೆಯಾಗಿತ್ತು. ಹಾಗೆಯೇ ಸಾವಿನ ಪ್ರಮಾಣವೂ 34ರಿಂದ 84ಕ್ಕೆ ಏರಿಕೆಯಾಗಿತ್ತು.

ಕೋವಿಡ್‌ ಅತಿ ಹೆಚ್ಚು ಪ್ರಕರಣಗಳು ಟೆಹ್ರಾನ್‌ನಲ್ಲಿ ಕಂಡುಬಂದಿದ್ದು, ಕೂಮ್‌, ಖುಝೆಸ್ಥಾನ್‌ಗಳು ರೆಡ್‌ಝೋನ್‌ಗಳಾಗಿದ್ದವು. ಈಗ ಇಲ್ಲೆಲ್ಲ ಕೋವಿಡ್‌ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಇರಾನ್‌ನಲ್ಲಿ ಸುಮಾರು 1.67 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 8413 ಮಂದಿ ಮೃತಪಟ್ಟಿದ್ದಾರೆ. ಇದು ನೈಜ ಅಂಕಿ ಅಂಶಗಳಲ್ಲ ಎಂದು ಹಲವರು ಹೇಳುತ್ತಿದ್ದಾರೆ.

ತಿಳಿಯಾಗದ ಪರಿಸ್ಥಿತಿ
ಕೋವಿಡ್‌ ತೀವ್ರವಾಗುತ್ತಿದ್ದಾಗ ಇರಾನ್‌ ಕೂಡಲೇ ಅಂತರ್‌ ನಗರಗಳ ಸಂಚಾರ, ಶಾಲೆಗಳ ಮುಚ್ಚುವಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಿಷೇಧ ಇತ್ಯಾದಿ ಕ್ರಮಗಳನ್ನು ಕೈಗೊಂಡಿತ್ತು. ಬಳಿಕ ನಿರ್ಬಂಧವನ್ನು ಸಡಿಲ ಗೊಳಿಸಿದ್ದರಿಂದ ಸೋಂಕಿನ ಪೀಡೆ ಮತ್ತೆ ಕಾಣಿಸಿಕೊಂಡಿದೆ.

ಕಳೆದ ಎರಡು ವಾರಗಳಲ್ಲಿ ನಿತ್ಯದ ಸಾವಿನ ಪ್ರಮಾಣ ನೂರಕ್ಕೆ ಕಡಿಮೆ ಇತ್ತು. ಸುಮಾರು 34ರ ಆಸುಪಾಸಿನಲ್ಲಿತ್ತು. ಮೇ 25ರಿಂದ ಜೂ.1ರ ಅವಧಿಯಲ್ಲಿ ಇದು 81ಕ್ಕೆ ಏರಿಕೆಯಾಗಿತ್ತು. ಕಳೆದ ಒಂದೇ ದಿನದಲ್ಲಿ ಇದು 63ಕ್ಕೆ ಏರಿಕೆಯಾಗಿದೆ. ನಿಧಾನವಾಗಿ ಸಾವಿನ ಸಂಖ್ಯೆ ಏರುತ್ತಿರುವುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next