Advertisement
ಕಳೆದ ನಾಲ್ಕು ದಿನದಲ್ಲಿ ರಾಜ್ಯದಲ್ಲಿ ಸೋಂಕು ಪತ್ತೆಯಾಗಿರುವವರ ಸಂಖ್ಯೆ 130ಕ್ಕೂ ಅಧಿಕವಾಗಿದೆ. ಒಟ್ಟಾರೆ 384 ಕೋವಿಡ್-19 ಪ್ರಕರಣಗಳು ಈವರೆಗೂ ವರದಿಯಾಗಿದ್ದು, ಅದರಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. 104 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಎಲ್ಲರನ್ನು ನಿಗದಿತ ದಿನಾಂಕದವರೆಗೂ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
Related Articles
ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 384ಕ್ಕೆ ಏರಿದರೆ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಶನಿವಾರ ಕೋವಿಡ್-19 ಸೋಂಕಿತ 374ನೇ ರೋಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಜಯಪುರದ 374ನೇ ರೋಗಿ, ರೋಗಿ ಸಂಖ್ಯೆ 306 ಮತ್ತು 308ರ ಸಂಪರ್ಕದಲ್ಲಿದ್ದರು ಮತ್ತು ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯೂ ಇದೆ. ಎ.16 ರಂದು ಹೃದಯಾಘಾತದಿಂದ ಮರಣ ಹೊಂದಿದ್ದರು. ಇವರ ಗಂಟಲ ದ್ರವ ಪರೀಕ್ಷೆಯು ಎ.18ರಂದು ಪಾಸಿಟಿವ್ ಬಂದಿರುವುದರಿಂದ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ ಎಂದು ವಿವರ ನೀಡಿದರು.
Advertisement
ಕೋವಿಡ್-19 ಮುಕ್ತ ಜಿಲ್ಲೆಗಳುಚಾಮರಾಜ ನಗರ, ಚಿಕ್ಕಮಗಳೂರು, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ ಹಾಗೂ ಯಾದಗಿಯರಲ್ಲಿ ಯಾವುದೇ ಪ್ರಕರಣ ಈವರೆಗೂ ದಾಖಲಾಗಿಲ್ಲ. ಚಿತ್ರದುರ್ಗದಲ್ಲಿ ಪತ್ತೆಯಾದ ಒಂದು ಪ್ರಕರಣದಲ್ಲಿ ರೋಗಿ ಗುಣಮುಖರಾಗಿದ್ದಾರೆ. ದಾವಣಗೆರೆಯಲ್ಲಿ ಪತ್ತೆಯಾದ ಎರಡೂ ಪ್ರಕರಣದಲ್ಲಿ ರೋಗಿಗಳು ಗುಣ ಮುಖರಾಗಿದ್ದಾರೆ. ಉಡುಪಿಯಲ್ಲಿ ದಾಖಲಾದ ಮೂರು ಪ್ರಕರಣಗಳಲ್ಲೂ ರೋಗಿಗಳು ಗುಣಮುಖರಾಗಿದ್ದಾರೆ. ತುಮಕೂರಿನ 2 ಪ್ರಕರಣಗಳಲ್ಲಿ ಒಬ್ಬರು ಗುಣಮುಖರಾಗಿದ್ದು,ಮತ್ತೂಬ್ಬರು ಮೃತಪಟ್ಟಿದ್ದಾರೆ. ಜಿಲ್ಲಾವಾರು ಅಂಕಿಅಂಶ
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಪತ್ತೆಯಾಗಿರುವ ಹೊಸ 3 ಪ್ರಕರಣ ಸಹಿತವಾಗಿ 89 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 42 ಮಂದಿ ಗುಣಮುಖರಾಗಿದ್ದು, 44 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ ಮತ್ತು ಮೂವರು ಸಾವನ್ನಪ್ಪಿದ್ದಾರೆ. ಮೈಸೂರಿನ 80 ಸೋಂಕಿತರಲ್ಲಿ 22 ಮಂದಿ ಗುಣಮುಖರಾಗಿದ್ದು, 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಾಗಲಕೋಟೆಯಲ್ಲಿ 21 ಸೋಂಕಿತರಿದ್ದು, ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ 13 ಸೋಂಕಿತರು, ಬೆಳಗಾವಿಯಲ್ಲಿ 42 ಸೋಂಕಿತರಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 12 ಸೋಂಕಿತರಿದ್ದು, ಅದರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಬೀದರ್‌ನಲ್ಲಿ 14 ಸೋಂಕಿತರು, ಚಿಕ್ಕಬಳ್ಳಾಪುರದ 16 ಸೋಂಕಿತರಲ್ಲಿ 8 ಮಂದಿ ಗುಣಮುಖರಾಗಿದ್ದು, 2 ಸಾವಾಗಿದೆ. ದಕ್ಷಿಣ ಕನ್ನಡದಲ್ಲಿ 12 ಸೋಂಕಿತರಲ್ಲಿ 11 ಮಂದಿ ಗುಣಮುಖರಾಗಿದ್ದಾರೆ. ಧಾರವಾಡದ 7 ಸೋಂಕಿತರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಗದಗದ 3 ಸೋಂಕಿತರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿಯ 22 ಪ್ರಕರಣದಲ್ಲಿ ಮೂವರು ಗುಣಮುಖರಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಮಂಡ್ಯದಲ್ಲಿ 12 ಸೋಂಕಿತರು, ಉತ್ತರ ಕನ್ನಡದ 11 ಸೋಂಕಿತರಲ್ಲಿ 9 ಮಂದಿ ಗುಣಮುಖರಾಗಿದ್ದು, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರದ 21 ಸೋಂಕಿತರಲ್ಲಿ 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಈವರೆಗಿನ 384 ಸೋಂಕಿತರಲ್ಲಿ 104 ಗುಣಮುಖರಾಗಿದ್ದು, 266 ಮಂದಿ ಚಿಕಿತ್ಸೆ ಪಡೆಯುತಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ.