Advertisement
ಈ ವ್ಯಕ್ತಿ ಮಾ. 13ರಂದು ರಾತ್ರಿ ದುಬಾೖಯಿಂದ ವಿಮಾನದಲ್ಲಿ ಹೊರಟು 14ರಂದು ಬೆಳಗ್ಗೆ 5.20ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಅಲ್ಲಿಂದ ಖಾಸಗಿ ಕಾರಿನಲ್ಲಿ ಇಬ್ಬರೊಂದಿಗೆ ಹೊರಟು 7 ಗಂಟೆಗೆ ಖಾಸಗಿ ಆಸ್ಪತ್ರೆಯೊಂದ ರಲ್ಲಿ ರಕ್ತ ತಪಾಸಣೆ ನಡೆಸಿದ್ದರು. 8 ಗಂಟೆಗೆ ಮತ್ತೂಂದು ಖಾಸಗಿ ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಚಹಾ ಸೇವಿಸಿ ಸರಕಾರಿ ಆಸ್ಪತ್ರೆಗೆ ಆಗಮಿಸಿ ಮಾಹಿತಿ ನೀಡಿದ್ದರು. ಮಧ್ಯಾಹ್ನ ಬೇವಿಂಜೆಯ ಮನೆಯೊಂದಕ್ಕೆ ಭೇಟಿ ನೀಡಿದ್ದರು. ಒಂದೂವರೆಗೆ ಕಳನಾಡಿನಲ್ಲಿರುವ ಸ್ವಂತ ಮನೆಗೆ ತೆರಳಿದ್ದರು. ಅನಂತರ ನಿಗಾದಲ್ಲಿದ್ದರು. ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ನ್ಯಾಷನಲ್ ಇನ್‌ಫಾರ್ಮೆಟಿಕ್ಸ್‌ನ ಸಹಕಾರದೊಂದಿಗೆ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ.
ಕೊರೊನಾ ವೈರಸ್ ಪ್ರತಿರೋಧದ ಅಂಗವಾಗಿ ಆರೋಗ್ಯ ಇಲಾಖೆ ಮತ್ತು ಪೊಲೀಸರು ಸಂಯುಕ್ತವಾಗಿ ರೈಲು ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ನಡೆಸು ತ್ತಿದ್ದಾರೆ. ನಿಲ್ದಾಣದ ಪ್ಲಾಟ್‌ಫಾಂನಲ್ಲಿ 24 ಗಂಟೆ ಕಾರ್ಯಾಚರಿಸುವ ಹೆಲ್ಪ್ ಡೆಸ್ಕ್ ಮತ್ತು ತಪಾಸಣೆಯಿಂದಾಗಿ ಪ್ರಯಾಣಿಕರಿಗೆ ಸ್ಪಷ್ಟ ಮಾಹಿತಿ ಲಭಿಸುತ್ತಿದೆ. ಆಸ್ಪತ್ರೆಯಲ್ಲಿ ಕಟ್ಟೆಚ್ಚರ
ಕಳನಾಡಿನ ಯುವಕನಿಗೆ ಕೋವಿಡ್-19 ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ಜಾಗರೂಕತೆ ಬಲಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ. ಪ್ರಾಥ ಮಿಕ ಆರೋಗ್ಯ ಕೇಂದ್ರಗಳಲ್ಲಿ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದರೂ ಚಿಕಿತ್ಸೆಗಾಗಿ ಕಾಂಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನಗತ್ಯ ಜನನಿಬಿಡ ತೆರವುಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟು ಪಾಲಿಸಲಾಗುತ್ತಿದೆ ಎಂದವರು ಹೇಳಿದರು.
Related Articles
ಕೊರೊನಾ ಸೋಂಕು ಹರಡುವಿಕೆ ತಡೆ ಮತ್ತು ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಸ್ವೀಕರಿಸಲು ಜಿಲ್ಲಾ ವಿಪತ್ತು ನಿವಾರಣೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ.
ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಶುಚಿತ್ವ ಕಾಯ್ದುಕೊಳ್ಳುವ ಸಂಬಂಧ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಖಚಿತತೆ ಒದಗಿಸಬೇಕು.
Advertisement
ಹೊಟೇಲ್‌ಗಳು, ರೆಸ್ಟಾ ರೆಂಟ್ ಗಳು, ಆರಾಧನಾಲಯಗಳು, ಬಸ್- ರೈಲು ನಿಲ್ದಾಣಗಳು, ಸರಕಾರಿ ಸಂಸ್ಥೆಗಳು, ಸಾರ್ವಜನಿಕ ಕಟ್ಟಡಗಳು ಇತ್ಯಾದಿಗಳ ಶುಚಿತ್ವ ಸಂಬಂಧ ಸಂಸ್ಥೆಗಳ ಮುಖ್ಯಸ್ಥರು, ಮಾಲಿಕರು ಖಚಿತತೆ ಮೂಡಿಸಬೇಕು.
“ಬ್ರೇಕ್ ದಿ ಚೈನ್’ ಅಭಿಯಾನದ ಅಂಗವಾಗಿ ಎಲ್ಲ ಸರಕಾರಿ ಕಚೇರಿಗಳಲ್ಲಿ, ಕಚೇರಿಯ ಮುಖ್ಯಸ್ಥರು, ಸಿಬಂದಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಶುದ್ಧ ನೀರಿನಿಂದ ಕೈತೊಳೆಯುವ ನಿಟ್ಟಿನಲ್ಲಿ ಹ್ಯಾಂಡ್ ವಾಷ್ ದ್ರಾವಕ, ಸ್ಯಾನಿಟೈಸರ್ ಸಜ್ಜುಗೊಳಿಸಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ವಿವಿಧ ಕಾಯಿದೆಗಳ ಪ್ರಕಾರ ಶಿಕ್ಷಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕೊರೊನಾ ಎಚ್ಚರಿಕೆ ಸೂಚನೆ 50ಕ್ಕೂ ಅಧಿಕ ಮಂದಿ ಸೇರುವ ವ್ಯಾಪಾರ ಸಂಸ್ಥೆಗಳ ಮುಂಭಾಗದಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಇರಿಸಬೇಕು. ಈಗಿರುವ ವ್ಯಾಪಾರ ಸಂಸ್ಥೆಗಳು ಮುಚ್ಚುಗಡೆ ನಡೆಸಬೇಕಾದ ಪರಿಸ್ಥಿತಿ ಇಲ್ಲ. ದುಬಾೖಯಿಂದ ಆಗಮಿಸಿರುವ ಮಂದಿ ಈ ಕೆಳಗೆ ನಮೂದಿಸಲಾದ ದೂರವಾಣಿ ನಂಬ್ರಕ್ಕೆ ಕಡ್ಡಾಯವಾಗಿ ಕರೆಮಾಡಬೇಕು: 9946000493, 9946000293. ಕಾಸರಗೋಡಿನಲ್ಲಿ ಕೋವಿಡ್-19 ಸೋಂಕು ತಗುಲಿರುವುದು ಖಚಿತ ಗೊಂಡಿರುವ ವ್ಯಕ್ತಿ ಯಾತ್ರೆ ಮಾಡಿರುವ 1×814 ದುಬಾೖ-ಮಂಗಳೂರು ವಿಮಾನಲ್ಲಿ ಮಾ.13 ರಂದು ರಾತ್ರಿ ಪ್ರಯಾಣಿಸಿ ಮಾ.14 ರಂದು ಬೆಳಗ್ಗೆ ಮಂಗಳೂರಿಗೆ ತಲುಪಿದ ವ್ಯಕ್ತಿಗಳು ತತ್‌ಕ್ಷಣ ಜಿಲ್ಲೆಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬೇಕು ದೂರವಾಣಿ ಸಂಖ್ಯೆ: 9946000493, 9946000293. ಕಟ್ಟೆಚ್ಚರ ಆದೇಶ
ಜಿಲ್ಲೆಯ ಎಲ್ಲ ಸಾರ್ವಜನಿಕ ಪ್ರದೇಶಗಳು, ಸಭಾಂಗಣಗಳು, ಕಲ್ಯಾಣ ಮಂಟಪಗಳು, ಅಧಿ ವೇಶನ ಕೇಂದ್ರಗಳು, ಸಮುದಾಯ ಸಭಾಂಗಣಗಳು ಇತ್ಯಾದಿಗಳಲ್ಲಿ 50ಕ್ಕಿಂತ ಕಡಿಮೆ ಸಂಖ್ಯೆಯ ಮಂದಿ ಮಾತ್ರ ಸೇರಬಹುದಾಗಿದೆ. ಈ ಆದೇಶ ಉಲ್ಲಂಘಿಸಿ ಜನ ಸೇರಿದಲ್ಲಿ ಅಗತ್ಯದ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್‌ರಿಗೆ ಹೊಣೆ ನೀಡಲಾಗಿದೆ. ಅನಂತರವೂ ಆದೇಶದ ಉಲ್ಲಂಘನೆ ನಡೆದಲ್ಲಿ ಸಂಸ್ಥೆಯ ಪರವಾನಿಗೆ ರದ್ದುಗೊಳಿಸಿ, ಬೀಗ ಜಡಿದು, ಮುದ್ರೆಯೊತ್ತಲು ಸ್ಥಳೀಯಾಡಳಿತ ಸಂಸ್ಥೆಯ ಕಾರ್ಯ ದರ್ಶಿಗಳಿಗೆ ಆದೇಶ ನೀಡಲಾಗಿದೆ.