Advertisement

ಕಾನೂನು ಮಹಾವಿದ್ಯಾಲಯ ಆರಂಭಕ್ಕೆ ಒಡಂಬಡಿಕೆ

01:48 PM Aug 18, 2019 | Team Udayavani |

ಭಟ್ಕಳ: ಕಳೆದ ಶತಮಾನಗಳಿಂದ ವಿದ್ಯಾಪ್ರಸಾರದಲ್ಲಿ ತೊಡಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಅಂಜುಮಾನ್‌ ಹಾಮಿ-ಇ-ಮುಸ್ಲಿಮೀನ್‌ ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ ಕಾನೂನು ಮಹಾವಿದ್ಯಾಲಯ ಸ್ಥಾಪಿಸಲು ಮುಂದಡಿ ಇಟ್ಟಿದ್ದು ಈ ಭಾಗದ ಜನತೆಗೆ ಉತ್ತಮ ಅವಕಾಶ ದೊರೆತಂತಾಗಿದೆ.

Advertisement

ಈ ಕುರಿತು ಚೆನ್ನೈನ ಕ್ರೆಸೆಂಟ್ ಇನ್ಸಸ್ಟಿಟ್ಯೂಟ್ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಅಂಜುಮಾನ್‌ ಇನ್ಸಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಆ್ಯಂಡ್‌ ಮೆನೇಜ್‌ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಉಭಯ ಮುಖ್ಯಸ್ಥರು ಸಹಿ ಮಾಡುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದಿಂದ ಕಾನೂನು ಮಹಾವಿದ್ಯಾಲಯ ಸ್ಥಾಪನೆಗೆ ಮುಂದಡಿ ಇಟ್ಟಂತಾಗಿದೆ.

ಚೆನ್ನೈನ ಕ್ರೆಸೆಂಟ್ ಇನ್ಸಸ್ಟಿಟ್ಯೂಟ್ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆ ಮುಖ್ಯಸ್ಥ ರಾಜಾಹಸನ್‌ ಹಾಗೂ ಅಂಜುಮನ್‌ ಸಂಸ್ಥೆ ಅಧ್ಯಕ್ಷ ಅಬ್ದುಲ್ ರಹೀಮ್‌ ಜುಕಾಕೋ ಪರಸ್ಪರ ಸಹಿ ಹಾಕಿ ವಿನಿಮಯ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next