Advertisement

ಕೊವ್ಯಾಕ್ಸಿನ್‌ ಲಸಿಕೆ ನೀಡದಿದ್ದರೆ ಧರಣಿ: ಶಾಸಕ

11:24 AM May 18, 2021 | Team Udayavani |

ದೊಡ್ಡಬಳ್ಳಾಪುರ: ಲಸಿಕೆ ನೀಡುವಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ತಾಲೂಕಿಗೆ ಅಗತ್ಯವಿರುವಷ್ಟು ಕೊವ್ಯಾಕ್ಸಿನ್‌ ಲಸಿಕೆಯನ್ನು ಪೂರೈಸಿ ಜನರು ಸಾಲುಗಟ್ಟಿ ನಿಲ್ಲುವುದು ತಡೆಗಟ್ಟಿ. ಇಲ್ಲವಾದಲ್ಲಿ ಜನರ ಪರವಾಗಿ ಧರಣಿ ನಡೆಸ ಬೇಕಾಗುತ್ತದೆ ಎಂದು ಶಾಸಕ ಟಿ. ವೆಂಕಟರಮಣಯ್ಯ ಆರೋಗ್ಯ ಇಲಾಖೆಯ ಲಸಿಕಾ ವಿತರಕರಿಗೆ ಎಚ್ಚರಿಸಿದರು.

Advertisement

ನಗರದ ಆಯುಷ್‌ ಸರ್ಕಾರಿ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆಎರಡನೇ ಡೋಸ್‌ಗೆ ಕೊವ್ಯಾಕ್ಸಿನ್‌ ಲಸಿಕೆ ಸಮರ್ಪಕವಾಗಿಲ್ಲದೇ ನಿತ್ಯ ಜನರು ಅಲೆದಾಡುವಂತಾಗಿದೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ಲಸಿಕಾವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಲಸಿಕಾ ಹಾಕುವ ಸಿಬ್ಬಂದಿ ಮಾಹಿತಿ ನೀಡಿ ತಾಲೂಕಿನಲ್ಲಿ ಸುಮಾರು 2,500 ಸಾವಿರ ಜನರಿಗೆ ಕೊವ್ಯಾಕ್ಸಿನ್‌ ಲಸಿಕೆಯ ಮೊದಲನೇ ಡೋಸ್‌ ಹಾಕಲಾಗಿದೆ. 500ಮಂದಿಗೆ ಮಾತ್ರವೇ ಎರಡನೇ ಡೋಸ್‌ನೀಡಲಾಗಿದ್ದು, ಲಸಿಕೆ ಲಭ್ಯತೆ ಇಲ್ಲ. ಆದರೆ ಜನರು ನಿತ್ಯ ಬಂದು ಸಿಬ್ಬಂದಿಯನ್ನು ಕೇಳುತ್ತಿರುತ್ತಾರೆ ಎಂದರು.

ಜಿಲ್ಲೆಗೆ ಲಸಿಕಾ ವಿತರಣೆ ಮಾಡುವವರೊಂದಿಗೆ ಮೊಬೈಲ್‌ನಲ್ಲಿ ಮಾತನಾ ಡದ ಶಾಸಕರು, ನೆರೆಯ ಚಿಕ್ಕಬಳ್ಳಾಪುರಕ್ಕೆ ಹೆಚ್ಚಿನ ಲಸಿಕೆ ಹೋಗ್ತಿದ್ದು, ಇಲ್ಲಿನವರು ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದಾರೆ ಎನ್ನುವ ದೂರುಗಳಿವೆ. ನಮ್ಮ ತಾಲೂಕಿಗೆ ಅಗತ್ಯ ವಿರುವಷ್ಟು ಕೊವ್ಯಾಕ್ಸಿನ್‌ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಲಸಿಕೆ ವಿತರಕರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಲೂಕಿನ ರೋಗಿಗಳಿಗೆ ಮೊದಲ ಆದ್ಯತೆ ನೀಡಿ :

Advertisement

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ತಾಲೂಕಿನವರು ದಾಖಲಾಗುತ್ತಿದ್ದಾರೆ. ಕೆಲವರು ವೈದ್ಯರ ಮೇಲೆ ಒತ್ತಡ ಹಾಕಿ ಬೆಡ್‌ಗಳನ್ನು ಬೇಕಾದವರಿಗೆ ನೀಡುತ್ತಿದ್ದಾರೆ ಎಂದು ದೂರುಗಳ ಬಂದ ಹಿನ್ನಲೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದರು. ನಮ್ಮ ತಾಲೂಕಿನ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕು.ಆರೋಗ್ಯರಕ್ಷಾ ಸಮಿತಿ ಸೇರಿದಂತೆ ಯಾರೇ ಆಗಲಿ ಅನಗತ್ಯವಾಗಿ ಆಸ್ಪತ್ರೆಯ ಆಡಳಿತ ವಿಚಾರದಲ್ಲಿ ತಲೆ ಹಾಕಬಾರದು. ಬೆಡ್‌ಗಳನ್ನು ನಿಯಮ ಬಾಹಿರವಾಗಿ ಯಾರಿಗೂ ನೀಡಬಾರದು. ಆಡಳಿತ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳಾಗದಂತೆ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next