ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಲಭ್ಯವಿಲ್ಲ. ಈ ಕುರಿತು ಆಸ್ಪತ್ರೆಯಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಿದ್ದರೂ ಪದೇ ಪದೇ ನಮ್ಮನ್ನೇ ಕೇಳಲು ಬರುತ್ತಾರೆ. ಹೇಳಿ ಹೇಳಿ ನಮಗೂ ಸಾಕಾಗಿ ಹೋಗಿದೆ. ಹೀಗಾಗಿ ಜನ ಓದಿ ಕೊಳ್ಳಲಿ ಎಂದು ಕುತ್ತಿಗೆಗೆ ನೋಟಿಸ್ ಬೋರ್ಡ್!.
ಉತ್ತರಿಸಿ ಬೇಸತ್ತಿದ್ದಾರೆ: ಹೀಗೆಂದು ಉತ್ತರಿಸಿದ್ದು ತಾಲೂಕು ಆರೋಗ್ಯಾಧಿ ಕಾರಿ ಡಾ.ಎನ್.ಕೆ.ವೆಂಕಟೇಶ್. ಕಳೆದ ಕೆಲ ದಿನಗಳಿಂದ ಲಸಿಕೆ ಹಾಕಿಸಿಕೊಳ್ಳುವವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದು ಲಸಿಕೆ ಬಗ್ಗೆ ನಿರಂತರವಾಗಿ ವಿಚಾರಿಸುತ್ತಿದ್ದರು. ಹೀಗಾಗಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎನ್.ಕೆ.ವೆಂಕಟೇಶ್ ಹಾಗೂ ವೈದ್ಯರು, ಸಿಬ್ಬಂದಿಗೆ ಬೇಸತ್ತು ಆಸ್ಪತ್ರೆ ಯಲ್ಲಿ ಲಸಿಕೆ ಲಭ್ಯವಿಲ್ಲ ಎಂದು ಕುತ್ತಿಗೆಗೆ ಬೋರ್ಡ್ ನೇತು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ.
ಕೆಲಸ ಮಾಡಲು ಆಗುತ್ತಿಲ್ಲ:
ತಾಲೂಕು ಆರೋಗ್ಯಾಧಿಕಾರಿ ಡಾ.ಎನ್. ಕೆ.ವೆಂಕ ಟೇಶ್ ಮಾತನಾಡಿ, ನಾವು ಆಸ್ಪತ್ರೆ ಆವರಣದಲ್ಲಿ ಹಲವು ಬೋರ್ಡ್‌ಗಳನ್ನು ಹಾಕಿದ್ದೇವೆ. ಆದರೂ, ಜನ ನಮ್ಮನ್ನೇ ಕೇಳುತ್ತಿದ್ದು ಬೋರ್ಡ್ ಹಾಕಿಕೊಂಡು ಕಾರ್ಯನಿರ್ವಹಿಸುವಂತೆ ಆಗಿದೆ. ಪ್ರತಿ ನಿತ್ಯ ನಮ್ಮ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ 150 ಲಸಿಕೆ, 45 ವರ್ಷಕ್ಕೂ ಮೇಲ್ಪಟ್ಟವರಿಗೆ 50ರಿಂದ 60 ಜನರಿಗೆ ಲಸಿಕೆ ಹಾಕುತ್ತಿದ್ದೇವೆ. ನಮ್ಮಲ್ಲಿ ಅರಕೆರೆ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಲಾ 20 ಲಸಿಕೆ ಬಿಟ್ಟರೆ ಸರ್ಕಾರ ಸರಬರಾಜು ಮಾಡುವವರೆಗೂ ತಾಲೂಕಿನಲ್ಲಿ ಲಸಿಕೆ ಲಭ್ಯವಿಲ್ಲ. ಆದರೆ, ನಮ್ಮ ಎಲ್ಲಾ ಆಸ್ಪತ್ರೆಗಳ ಮುಂದೆ ಬೆಳಗ್ಗೆ 5ಗಂಟೆಗೆ ನೂರಾರು ಜನ ಬಂದು ಸರದಿ ಸಾಲಿನಲ್ಲಿ ಲಸಿಕೆಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ. ಇದರಿಂದ ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸಿದರು.
ಸಮಸ್ಯೆಗಳಿಂದ ಪಾರಾಗಲು:ನಂತರ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಾರುತಿ ಮಾತ ನಾಡಿ, ನಾವು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಿಂದ ಕೋವಿಡ್ ಟೆಸ್ಟ್ ಮಾಡುವ ಕಾರ್ಯ ಚಟು ವಟಿಕೆಯನ್ನೇ ಗುರುಭವನಕ್ಕೆ ವರ್ಗಾವಣೆ ಮಾಡಿ ದ್ದೇವೆ. ಅಧಿಕ ಕೆಲಸದ ಒತ್ತಡ ಹಾಗೂ ಹೆಚ್ಚಿನ ಜನ ಒಂದೆಡೆ ಇದ್ದರೆ ಸೋಂಕು ಹರಡುವಿಕೆ ತಡೆಗಟ್ಟುವು ದನ್ನು ನಿಲ್ಲಿಸಲು, ಲಸಿಕೆ ಬಗ್ಗೆ ನೂರಾರು ಜನ ಸಿಬ್ಬಂದಿ ಹೇಳುವುದನ್ನು ನಂಬದೆ ಆಸ್ಪತ್ರೆ ಹಿರಿಯ ಅಧಿಕಾರಿಗಳ ಜತೆಯೇ ಮಾತನಾಡಬೇಕು ಎಂದು ಗಲಾಟೆ ಮಾಡು ತ್ತಾರೆ. ಈ ಸಮಸ್ಯೆಗಳಿಂದ ಪಾರಾಗಲು ನಾವೂ, ನಮ್ಮ ಸಿಬ್ಬಂದಿ ಹೈರಾಣಾಗಿ ಕುತ್ತಿಗೆಗೆ ಬೋರ್ಡ್ ಹಾಕಿ ಕೊಂಡು ಕೆಲಸ ಮಾಡುತ್ತಿದ್ದೇವೆಂದರು.