Advertisement
ನಾಲ್ಕು ವಾರದೊಳಗೆ ನ್ಯಾಯಾಲ ಯಕ್ಕೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಈ ಕೇಸನ್ನು ಜೂ. 14ರಂದು ಪರಿಗಣಿಸಲಾಗುವುದು. ಆರೋಪಿಗಳಿಗೆ ಕೆಳಗಿನ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಈ ಹಿಂದೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ತೀರ್ಪಿನ ವಿರುದ್ಧ ಕೊಗ್ಗು ಸಹಿತ ಆರೋಪಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
Related Articles
ಜಿಲ್ಲಾ ಸೆಶನ್ಸ್ ನ್ಯಾಯಾಲಯ ಇವರಿಗೆ ವಿಧಿಸಿದ್ದ 7 ವರ್ಷಗಳ ಕಠಿನ ಸಜೆಯನ್ನು ಮೇಲ್ಮನವಿಯಲ್ಲಿ ಹೈಕೋರ್ಟ್ 4 ವರ್ಷವಾಗಿ ಕಡಿಮೆಗೊಳಿಸಿತ್ತು. ಇದರ ವಿರುದ್ಧ ತಮ್ಮನ್ನು ಪೂರ್ಣವಾಗಿ ಆರೋಪ ಮುಕ್ತಗೊಳಿಸಬೇಕೆಂದು ಆರೋಪಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಶಿಕ್ಷೆ ವಿಧಿಸಿದ ಕಾರಣ ಕೊಗ್ಗು ಪಂಚಾಯತ್ ಸದಸ್ಯನಾಗಿ ಮುಂದುವರಿಯುವುದನ್ನು ತಾತ್ಕಾಲಿಕವಾಗಿ ಚುನಾವಣಾ ಆಯೋಗ ಮಾ. 30ರಿಂದ ತಡೆಹಿಡಿದಿತ್ತು. 1998ರ ಅ. 9ರಂದು ವಿನು (19) ಅವರನ್ನು ಕೊಲೆಗೈಯ್ಯಲಾಗಿತ್ತು.
Advertisement