Advertisement
ಉಗ್ರ ಯಾಸಿನ್ ಮಾತ್ರವಲ್ಲದೆ ಡ್ಯಾನಿಶ್ ಅನ್ಸಾರಿ ಸಹಿತ ಒಟ್ಟು ಹತ್ತು ಮಂದಿಯ ವಿರುದ್ಧ ದೇಶದ ವಿರುದ್ಧ ಯುದ್ಧ ಸಾರಿದ ಆರೋಪದ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ಮಾ.31ರಂದೇ ಹೊಸದಿಲ್ಲಿಯ ಪಾಟಿಯಾಲಾ ಹೌಸ್‌ನಲ್ಲಿರುವ ವಿಶೇಷ ನ್ಯಾಯಾಲ ಯದ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಆದೇಶ ನೀಡಿದ್ದರು.
Related Articles
Advertisement
ವೀಡಿಯೋಗಳು: ಯಾಸಿನ್ ಮತ್ತು ಆತನ ಸಹಚರರು ಹೊಂದಿದ್ದ ವೀಡಿಯೋ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಉಗ್ರ ಸಂಘಟನೆ ಅಲ್-ಕಾಯಿದಾ ಜೆಹಾದ್‌ಗೆ ಪ್ರೋತ್ಸಾಹ ನೀಡುವ ಕ್ರೂರ ಅಂಶಗಳು ಇರುವ ವೀಡಿಯೋಗಳು ಇದ್ದವು.
ಪದೇ ಪದೆ ಕುಕೃತ್ಯ: ಉಗ್ರ ಯಾಸಿನ್ ಪದೇ ಪದೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದದ್ದು ದೃಢಪಟ್ಟಿದೆ ಎಂದು ಚಾರ್ಜ್‌ಶೀಟ್ ಅನ್ನು ಪರಿ ಶೀಲಿಸಿದ ಸಂದರ್ಭದಲ್ಲಿ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅಭಿಪ್ರಾಯಪಟ್ಟರು.
ದೇಶದ ಹಲವೆಡೆ ಉಗ್ರ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುವುದು ಮಾತ್ರ ವಲ್ಲ, ಸುಧಾರಿತ ಸ್ಫೋಟಕಗಳನ್ನು ತಯಾರಿಸುವಲ್ಲಿ ಕೂಡ ಆತ ಸಿದ್ಧಹಸ್ತನಿದ್ದಾನೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಮೂವರ ಖುಲಾಸೆ: ಎಲ್ಲ ಅಂಶಗಳನ್ನು ಪರಿಶೀಲಿಸಿದ ಕೋರ್ಟ್, ಮೂವರನ್ನು ಆರೋಪಮುಕ್ತಗೊಳಿಸಿತು. ಯಾಸಿನ್ ಭಟ್ಕಳ ಅಲ್ಲದೆ, ಮೊಹಮ್ಮದ್ ಡ್ಯಾನಿಶ್ ಅನ್ಸಾರಿ, ಮೊಹಮ್ಮದ್ ಅಫ್ತಾಬ್ ಆಲಂ, ಇಮ್ರಾನ್ ಖಾನ್, ಸಯ್ಯದ್, ಉಬೈದ್ ಉರ್ ರೆಹಮಾನ್, ಅಸಾದುಲ್ಲಾ ಅಖ್ತರ್, ಉಜೈರ್ ಅಹ್ಮದ್, ಮೊಹಮ್ಮದ್ ತೆಹ್ಸಿàನ್ ಅಖ್ತರ್, ಹೈದರ್ ಅಲಿ ಮತ್ತು ಜಿಯಾ ಉರ್ ರೆಹಮಾನ್ ಎಂಬುವರ ವಿರುದ್ಧ ಚಾರ್ಜ್ ಶೀಟ್‌ನಲ್ಲಿ ಆರೋಪಗಳನ್ನು ಮಾಡಲಾಗಿದೆ.
ನೆರವಿಗೆ ಹವಾಲಾ ಜಾಲಎಲ್ಲ ಕುಕೃತ್ಯಗಳಿಗೆ ನಿಷೇಧಿತ ಸಂಘಟನೆಗೆ ಹವಾಲಾ ಜಾಲದ ಮೂಲಕ ಆರ್ಥಿಕ ನೆರವು ಬರುತ್ತಿತ್ತು. ಐಎಂ ಹಾಗೂ ಅದರ ಸಹವರ್ತಿ ಸಂಘಟನೆಗಳಿಗೆ ಬುಡಮೇಲು ಕೃತ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಈ ಮೊತ್ತ ಹಂಚಿಕೆಯಾಗುತ್ತಿತ್ತು. ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಪ್ರಧಾನವಾಗಿ ಇರಿಸಿಕೊಂಡು ದೇಶದಲ್ಲಿ ಮುಸ್ಲಿಂ ಸಮುದಾಯದವರನ್ನು ರೊಚ್ಚಿಗೆಬ್ಬಿಸಲು ಬೇಕಾದ ತಯಾರಿಯನ್ನೂ ಅವರು ನಡೆಸುತ್ತಿದ್ದರು. ವಿಶೇಷವಾಗಿ ಸಮುದಾಯದ ಯುವಕರಲ್ಲಿ ದ್ವೇಷ ಮೂಡಿಸುವಂಥ ವಾತಾವರಣ ನಿರ್ಮಾಣಕ್ಕೆ ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.