Advertisement

ಆರು ಸಚಿವರಿಗೆ ಮಧ್ಯಾಂತರ ರಕ್ಷಣೆ : ಸಚಿವರ ಅರ್ಜಿ ಪರಿಗಣಿಸಿದ ಕೋರ್ಟ್‌

12:08 AM Mar 07, 2021 | Team Udayavani |

ಬೆಂಗಳೂರು : ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣದ ಬೆನ್ನಲ್ಲೇ ನ್ಯಾಯಾಲಯದ
ಮೊರೆ ಹೊಕ್ಕಿರುವ ಆರು ಮಂದಿ ಸಚಿವರಿಗೆ “ಮಾನ ರಕ್ಷಣೆ’ಯ ಅಭಯ ಸಿಕ್ಕಿದೆ.

Advertisement

ಶಿವರಾಮ್‌ ಹೆಬ್ಟಾರ್‌, ಡಾ| ಕೆ. ಸುಧಾಕರ್‌, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜು, ಬಿ.ಸಿ. ಪಾಟೀಲ್‌ ಮತ್ತು ನಾರಾಯಣ ಗೌಡ ಅವರು ಸಲ್ಲಿಸಿದ್ದ ಅರ್ಜಿ ಬಗ್ಗೆ ನಗರದ 26ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿದರು. ಈ ಎಲ್ಲ ಸಚಿವರ ವಿರುದ್ಧ ಪರಿಶೀಲಿಸದ, ದೃಢಪಡಿಸದ ಸುದ್ದಿಗಳು, ಮಾನಹಾನಿಕಾರಕ ವಿಷಯಗಳನ್ನು ಪ್ರಕಟಿಸದಂತೆ ಮತ್ತು ಪ್ರಸಾರ ಮಾಡದಂತೆ ಹಾಗೂ ಸಿ.ಡಿ. ಬಿಡುಗಡೆ ಮಾಡದಂತೆ ಎಲ್ಲ ಮಾಧ್ಯಮಗಳಿಗೆ ತಾತ್ಕಾಲಿಕ ತಡೆ ನೀಡಿದರು.

ದೂರಿನಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಿ ಅದಕ್ಕೆ ಉತ್ತರಿಸುವಂತೆ ಸೂಚಿಸಿ ವಿಚಾರಣೆಯನ್ನು ಮಾ. 31ಕ್ಕೆ ಮುಂದೂಡಿದರು. ಅರ್ಜಿದಾರರು ಸರಕಾರದಲ್ಲಿ ಉನ್ನತ ಹುದ್ದೆ ಹೊಂದಿದ್ದಾರೆ. ಅವರ ವಿರುದ್ಧ ಪರಿಶೀಲನೆ ಇಲ್ಲದೆ, ದೃಢಪಡಿಸಿಕೊಳ್ಳದೆ ಮಾನಹಾನಿಕಾರಕ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡಿದರೆ, ಅವರ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ. ಸಮಾಜ, ಸ್ವಂತ ಕುಟುಂಬಗಳಲ್ಲಿ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಾನಹಾನಿ ವರದಿಗಳಿಂದ ನಮ್ಮ ತೇಜೋವಧೆ ಆಗುತ್ತದೆ. ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಬಹುದು. ನಮ್ಮ ಭವಿಷ್ಯ ರಾಜಕೀಯ ಜೀವನ ಗಮನದಲ್ಲಿಟ್ಟುಕೊಂಡು ನ್ಯಾಯಾಲಯಕ್ಕೆ ಹೋಗಿದ್ದೇವೆ. ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದು ಕೆಲವರಿಗೆ ಸಹಿಸಲು ಆಗುತ್ತಿಲ್ಲ.
– ಬೈರತಿ ಬಸವರಾಜ್‌

ಸಾರ್ವಜನಿಕ ಜೀವನದಲ್ಲಿರುವವರಿಗೆ ಸವಾಲುಗಳು ಸಾಮಾನ್ಯ. ಆದರೆ ನಮ್ಮ ವಿರುದ್ಧ ಷಡ್ಯಂತ್ರಗಳು ನಡೆದಾಗ ಇಂತಹ ದುಷ್ಟ ಶಕ್ತಿಗಳನ್ನು ಎದುರಿಸುವುದೂ ಅನಿವಾರ್ಯ. ರಾಜ್ಯದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸುತ್ತಿರುವ ಸಚಿವರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ತೇಜೋವಧೆ ಮಾಡುವ ರಾಜಕೀಯ ಷಡ್ಯಂತ್ರ ನಡೆಯುತ್ತಿರುವ ಗುಮಾನಿ ಇದೆ.
– ಡಾ| ಕೆ. ಸುಧಾಕರ್‌

Advertisement

ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನಾವು ಹೇಗಿದ್ದೇವೆ ಎಂಬುದು ನಮ್ಮ ಜನರಿಗೂ ಗೊತ್ತಿದೆ. ಆದರೂ ಆಧುನಿಕ ತಂತ್ರಜ್ಞಾನ ಬಳಸಿ ಮಾಡಲಾಗುತ್ತಿರುವ ಬ್ಲ್ಯಾಕ್‌ವೆುàಲ್‌ ಮತ್ತು ವೈಯಕ್ತಿಕ ತೇಜೋವಧೆ ತಡೆಗೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಬಿಜೆಪಿ ಸರಕಾರ ಬಲಪಡಿಸಲು ಬಂದವರನ್ನೇ ಗುರಿಯಾಗಿಸಿಕೊಂಡು ಬೆದರಿಸುವ ಪ್ರಯತ್ನ ನಡೆದಿದೆ.
– ಶಿವರಾಮ್‌ ಹೆಬ್ಟಾರ್‌

ನಾವು ಭಯದಿಂದ ನ್ಯಾಯಾಲಯಕ್ಕೆ ಹೋಗಿಲ್ಲ. ಸತ್ಯಾಂಶ ಇದ್ದರೆ ಬಿಡುಗಡೆ ಮಾಡಲಿ. ಆದರೆ ಗ್ರಾಫಿಕ್ಸ್‌ನಂತೆ ಸೃಷ್ಟಿಸಿ ಗೌರವಕ್ಕೆ ಧಕ್ಕೆ ತರಬಾರದು ಎಂಬ ಉದ್ದೇಶದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ.

ಒಬ್ಬ ರೈತನ ಮಗನಾಗಿ ಯಾವುದೇ ಗಾಡ್‌ ಫಾದರ್‌ ಇಲ್ಲದೆ ಇಷ್ಟರ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಇದು ಬಹಳ ಜನರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಯಾವುದೋ ರಾಜಕೀಯ ಷಡ್ಯಂತ್ರಕ್ಕೆ ವಿನಾಕಾರಣ ಸತ್ಯಾಸತ್ಯ ಅರಿಯದೆ ತೇಜೋವಧೆ ಆಗಬಾರದು ಎಂಬ ದೃಷ್ಟಿಯಿಂದ ಮುನ್ನಚ್ಚರಿಕೆಯಾಗಿ ಕೋರ್ಟ್‌ ಮೊರೆ ಹೊಕ್ಕಿದ್ದೇವೆ.
– ಬಿ.ಸಿ. ಪಾಟೀಲ್‌, ಕೃಷಿ ಸಚಿ ವ

Advertisement

Udayavani is now on Telegram. Click here to join our channel and stay updated with the latest news.

Next