ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಕಾರು ಜಪ್ತಿಗೆ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಲಾಯದಿಂದ ಆದೇಶ ಮಾಡಿದೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆ ಅವರ 33 ಗುಂಟೆ ಜಮೀನು ಭೀಮಾ ಏತ ನಿರಾವರಿ ಯೋಜನೆಯಡಿ ಮುಳುಗಡೆಯಾಗಿತ್ತು. ಇದಕ್ಕೆ ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರ ಕಾರು ಜಪ್ತಿ ಮಾಡಲು ಕೋರ್ಟ್ ಆದೇಶ ಮಾಡಿದೆ.
ಕಲ್ಲಪ್ಪ ಮೇತ್ರೆ ಎಂಬುವವರ 33 ಗುಂಟೆ ಜಮೀನು 2008ರಲ್ಲಿ ಮುಳುಗಡೆಯಾಗಿತ್ತು. 7.41 ಲಕ್ಷ ಪರಿಹಾರ ನೀಡವಂತೆ ಕೋರ್ಟ್ ಆದೇಶವಾಗಿತ್ತು. ಕೋರ್ಟ್ ಆದೇಶವಾದರೂ ಪರಿಹಾರ ನೀಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗೆ ಸೇರಿದ ಕೆಎ 32 ಜಿ 9990 ಸಂಖ್ಯೆಯ ಕಾರು ಜಪ್ತಿಗೆ ಇಂದು ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:ಭಕ್ತಿ ಮಾತ್ರವಲ್ಲ ಎಚ್ಚರಿಕೆಯೂ ಅಗತ್ಯ; ದೇವಸ್ಥಾನದಲ್ಲಿ ಜೋರಾಗಿ ಘಂಟೆ ಬಾರಿಸಿದರೆ ಕೇಸ್
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಬಂದು ಕಾರು ಜಪ್ತಿ ಮಾಡಿದರು.