Advertisement

Court ಸುಳ್ಯ: ಪೊಲೀಸರಿಗೆ ಹಲ್ಲೆ; ಆರೋಪಿ ಖುಲಾಸೆ

11:30 PM Aug 18, 2024 | Team Udayavani |

ಸುಳ್ಯ: ಪೋಲೀಸರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ, ಹೈವೇ ಪಟ್ರೋಲ್‌ ವಾಹನಕ್ಕೆ ಹಾನಿ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪವನ್ನು ಸಾಬೀತು ಮಾಡಲು ಸರಕಾರಿ ಅಭಿಯೋಜಕರು ವಿಫಲ ವಾಗಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ಸುಳ್ಯದ ನ್ಯಾಯಾಲಯ ತೀರ್ಪು ನೀಡಿದೆ.

Advertisement

2020 ಎಪ್ರಿಲ್‌ 1ರಂದು ಕೊರೋನಾ ಸಂದರ್ಭ ಮಂಡೆಕೋಲು ಗ್ರಾಮದ ಮುರೂರು ಚೆಕ್‌ ಪೋಸ್ಟ್‌ ಮೂಲಕ ವಾಹನಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವೇಳೆ ಆ ರಸ್ತೆಯಾಗಿ ಕಾಸರಗೋಡಿನಿಂದ ವಾಹನದಲ್ಲಿ ಸಿನಾನ್‌ ಬಂದಿದ್ದರು. ಮುರೂರು ಚೆಕ್‌ ಪೋಸ್ಟ್‌ನಲ್ಲಿ ಪೊಲೀಸರು ತಡೆದರು. ಈ ವೇಳೆ ಆರೋಪಿಯು ಕರ್ತವ್ಯದಲ್ಲಿದ್ದ ಪೋಲೀಸರನ್ನು ನಿಂದಿಸಿ, ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು. ಸಿನಾನ್‌ರನ್ನು ಪೋಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದು ಆರೋಪಿಯ ಆರೋಪವನ್ನು ರುಜುವಾತು ಪಡಿಸಲು ಸಾಧ್ಯವಾಗಿಲ್ಲ. ಮತ್ತು ಸಾಕ್ಷಿಗಳ ಹೇಳಿಕೆಗಳು ಒಂದಕ್ಕೊಂದು ಪೂರಕ ವಾಗಿರದೇ ಇರುವುದರಿಂದ ಇದು ನೈಜತೆಯಿಂದ ಕೂಡಿಲ್ಲ ಎಂದು ಹೇಳಿ ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಸಿನಾನ್‌ರ ಪರವಾಗಿ ನ್ಯಾಯವಾದಿಗಳಾದ ಶ್ಯಾಂ ಪಾಣತ್ತಿಲ, ಪ್ರತಿಭಾ ಶ್ಯಾಂ ಪಾಣತ್ತಿಲ ಹಾಗೂ ರಕ್ಷಿತಾ ಹರಿ ಉಳುವಾರು ವಾದಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next