ಪುತ್ತೂರು: ವ್ಯಾಜ್ಯ ಎಂಬುದು ಅಬುìದ ರೋಗದಂತೆ.ವ್ಯಾಜ್ಯವಿರುವಲ್ಲಿ ಶಾಂತಿ ಇರದು. ಅದರ ಪರಿಹಾರಕ್ಕೆ ನ್ಯಾಯಾಲಯ ವ್ಯವಸ್ಥೆ ಅನಿವಾರ್ಯ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯ ಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.
ಮಂಗಳವಾರ ಆನೆಮಜಲುವಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ 2ನೇ ಹಂತದ ಕಟ್ಟಡ ಮತ್ತು ದರ್ಬೆ ಯಲ್ಲಿ ನಿರ್ಮಾಣಗೊಳ್ಳಲಿರುವ ನ್ಯಾಯಾಧೀಶರ ವಸತಿ ಗೃಹಕ್ಕೆ ಶಿಲಾ ನ್ಯಾಸ ಹಾಗೂ ವಕೀಲರ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಂತಿ ಮತ್ತು ಸುವ್ಯವಸ್ಥೆ ಇಲ್ಲದಿದ್ದರೆ ಸಮಾಜದಲ್ಲಿ ನೆಮ್ಮದಿ ಇರದು. ಈ ನಿಟ್ಟಿನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸು ವುದು ಆದ್ಯ ಕರ್ತವ್ಯ ಎಂದರು.
ರಾಜ್ಯ ಸರಕಾರವು ನ್ಯಾಯಾಲಯಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸುತ್ತಿದೆ. ಮಹಿಳೆಯರೂ ನ್ಯಾಯ ವಾದಿಗಳಾಗಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದುತ್ತಿರುವುದು ಉತ್ತಮ ಸಂಗತಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಉಚ್ಚನ್ಯಾಯಾ ಲಯ ಹಾಗೂ ಆಡಳಿತಾ ತ್ಮಕ ನ್ಯಾಯಮೂರ್ತಿ ಕೆ. ಸೋಮಶೇಖರ್ ಮಾತನಾಡಿ, ನ್ಯಾಯವಾದಿಗಳು ಬುದ್ಧಿ ಮತ್ತೆಯ ಜತೆಗೆ ಹೃದಯ ವಂತರು ಆಗಬೇಕು. ಸತ್ಯಕ್ಕೆ ಗೆಲುವು ಕೊಡಿಸಲು ಆದ್ಯತೆ ನೀಡಬೇಕೆಂದರು. ಶಾಸಕ ಸಂಜೀವ ಮಠಂದೂರು ಮಾತನಾಡಿ, ನ್ಯಾಯಾ ಲಯ ಸಂಕೀರ್ಣವು ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹೊಸ ಗರಿ ಎಂದರು.
ಇದನ್ನೂ ಓದಿ:ಚೀನಾ ಗಡಿಭಾಗದಲ್ಲಿ 27 ರಸ್ತೆ ನಿರ್ಮಾಣಕ್ಕೆ ಚಾಲನೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇ ಗೌಡ, ಉಚ್ಚ ನ್ಯಾಯಾ ಲಯದ ರಿಜಿಸ್ಟ್ರಾರ್ ನ್ಯಾ| ಶಿವಶಂಕರೇ ಗೌಡ, ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಝ್, ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ಮಾಜಿ ಅಧ್ಯಕ್ಷ ಪಿ.ಪಿ. ಹೆಗ್ಡೆ, ಪಿಡಬ್ಲ್ಯುಡಿ ಮುಖ್ಯ ಅಭಿಯಂತರ ಕಾಂತರಾಜ್ ಬಿ.ಟಿ. ಮಾತನಾಡಿದರು.
ನ್ಯಾಯಮೂರ್ತಿ ಗಳಾದಎಸ್. ವಿಶ್ವಜಿತ್ ಶೆಟ್ಟಿ ಮತ್ತು ಹೆಚ್ಚುವರಿ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ಅವ ರನ್ನು ಸಮ್ಮಾನಿಸಲಾ ಯಿತು. ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ಮಂಜುನಾಥ ಎನ್.ಎಸ್. ವಂದಿಸಿದರು. ನ್ಯಾಯವಾದಿ ಕೆ. ಆರ್. ಆಚಾರ್ಯ ನಿರೂಪಿಸಿದರು.
ಸುಳ್ಯದಲ್ಲಿ ಶಿಲಾನ್ಯಾಸ
ಸುಳ್ಯ ನ್ಯಾಯಾಧೀಶರ ವಸತಿಗೃಹ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನ್ಯಾ| ಅಬ್ದುಲ್ ನಝೀರ್ ನೆರವೇರಿಸಿದರು.