Advertisement

ಏರ್‌ಸೆಲ್‌ ಮ್ಯಾಕ್ಸಿಸ್‌: ಚಿದು, ಕಾರ್ತಿಗೆ ಅ.8ರ ವರೆಗೆ ಬಂಧನ ಇಲ್ಲ

10:57 AM Aug 07, 2018 | Team Udayavani |

ಹೊಸದಿಲ್ಲಿ : ಸಿಬಿಐ ಮತ್ತು ಜಾರಿ ನಿರ್ದೇಶನಾಲಯದವರು ಹೂಡಿದ್ದ ಏರ್‌ಸೆಲ್‌ ಮ್ಯಾಕ್ಸಿಸ್‌ ಕೇಸಿನಲ್ಲಿ ಬಂಧಿಸಲ್ಪಡದಂತೆ ದಿಲ್ಲಿ ನ್ಯಾಯಾಲಯ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ನೀಡಿದ್ದ ಮಧ್ಯಾವಧಿ ರಕ್ಷಣೆಯನ್ನು ಅಕ್ಟೋಬರ್‌ 8ರ ವರೆಗೆ ವಿಸ್ತರಿಸಿದೆ. 

Advertisement

ಸಿಬಿಐ ಮತ್ತು ಇಡಿ ಪರವಾಗಿ ಇಂದು ಕೋರ್ಟಿಗೆ ಹಾಜರಾದ ವಕೀಲರು ಈ ಕೇಸಿನಲ್ಲಿ ವಾದ ಮಂಡಿಸುವ ಮುಖ್ಯ ವಕೀಲರಿಗೆ ಅನಾರೋಗ್ಯದ ಕಾರಣ ಕೋರ್ಟಿಗೆ ಬರಲಾಗಿಲ್ಲ ಎಂದು ವಿನಂತಿಸಿಕೊಂಡ ಕಾರಣ ವಿಶೇಷ ಸಿಬಿಐ ನ್ಯಾಯಾಧೀಶ ಒ ಪಿ ಸೈನಿ ಅವರು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 8ಕ್ಕೆ ನಿಗದಿಸಿದರು. 

ಅಂತೆಯೇ ಚಿದು ಮತ್ತು ಅವರ ಪುತ್ರ ಕಾರ್ತಿಗೆ ಬಂಧನದಿಂದ ಇದ್ದ ರಕ್ಷಣೆ ಅ.8ರ ವರೆಗೆ ವಿಸ್ತರಿಸಲ್ಪಟ್ಟಿತು. 

ಕಳೆದ ಜು.19ರಂದು ಸಿಬಿಐ ದಾಖಲಿಸಿದ್ದ ಚಾರ್ಜ್‌ ಶೀಟಿನಲ್ಲಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿಯನ್ನು ಮುಖ್ಯ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next