ಹೊಸದಿಲ್ಲಿ : ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಆರೋಪಿಯಗಿರುವ ಮಾಜಿ ಭಾರತೀಯ ವಾಯು ಪಡೆ ಮುಖ್ಯಸ್ಥ ಎಸ್ ಪಿ ತ್ಯಾಗಿ ವಿರುದ್ಧ ಜಾರಿ ಮಾಡಲಾಗಿದ್ದ Look out circular ರದ್ದು ಮಾಡುವಂತೆ ದಿಲ್ಲಿ ಕೋರ್ಟ್ ಸಿಬಿಐ ಗೆ ನಿರ್ದೇಶ ನೀಡಿದೆ.
ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಸಿಬಿಐ ಗೆ ಈ ನಿರ್ದೇಶ ನೀಡಿ ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವಂತೆ ಸೂಚಿಸಿತು.
ತ್ಯಾಗಿ ವಿರುದ್ಧ ಸಿಬಿಐ 2013ರಲ್ಲಿ Look out circular ಜಾರಿ ಮಾಡಿತ್ತು. ಪೊಲೀಸರಿಗೆ ಬೇಕಾದ ವ್ಯಕ್ತಿಯೊಬ್ಬ ಪ್ರಯಾಣದಲ್ಲಿದ್ದರೆ ಆತನ ವಿರುದ್ಧ Look out circular ಹೊರಡಿಸುವುದು ಕ್ರಮ.
2017ರ ಸೆ.1ರಂದು ಸಿಬಿಐ ತ್ಯಾಗಿ ಮತ್ತು ಬಿಟಿಷ್ ಪ್ರಜೆ ಕ್ರಿಶ್ಚಿಯನ್ ಮೈಕಲ್ ವಿರುದ್ಧ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಚಾರ್ಜ್ ಶೀಟ್ ದಾಖಲಿಸಿತ್ತು. ಈ ಚಾರ್ಜ್ ಶೀಟ್‌ನಲ್ಲಿ ಇನ್ನೂ ಎಂಟು ಮಂದಿಯನ್ನು ಹೆಸರಿಸಲಾಗಿದ್ದು ಅವರ ವಿರುದ್ದ ವಿವಿಐಪಿ ಹೆಲಿಕಾಪ್ಟರ್ ಡೀಲ್‌ನಲ್ಲಿ ಲಂಚ ಪಡೆದ ಆರೋಪ ಹೊರಿಸಲಾಗಿತ್ತು.
73ರ ಹರೆಯದ ತ್ಯಾಗಿ ಅವರು ಲಂಚ ಪ್ರಕರಣದಲ್ಲಿ ಸಿಮಿಐನಿಂದ ಚಾರ್ಜ್ ಶೀಟ್ ದಾಖಲಿಸಲ್ಪಟ್ಟ ಮೊತ್ತ ಮೊದಲ ಭಾರತೀಯ ವಾಯು ಪಡೆ ಮುಖ್ಯಸ್ಥರು. ತ್ಯಾಗಿ ಅವರು ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾರೆ.