Advertisement

V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ

07:53 PM May 24, 2024 | Team Udayavani |

ಹೊಸದಿಲ್ಲಿ: ನರ್ಮದಾ ಬಚಾವೋ ಆಂದೋಲನದ (NBA) ನಾಯಕಿ ಮೇಧಾ ಪಾಟ್ಕರ್ ವಿರುದ್ಧ ರಾಷ್ಟ್ರ ರಾಜಧಾನಿಯ ಹಾಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ನ್ಯಾಯಾಲಯ ಶುಕ್ರವಾರ ದೋಷಿ ಎಂದು ತೀರ್ಪು ನೀಡಿದೆ.

Advertisement

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮ ಅವರು ಮೇಧಾ ಪಾಟ್ಕರ್ ಅವರನ್ನು ಕ್ರಿಮಿನಲ್ ಮಾನನಷ್ಟ ಅಪರಾಧಿ ಎಂದು ಘೋಷಿಸಿದರು. ಸಂಬಂಧಿತ ಕಾನೂನಿನ ಅಡಿಯಲ್ಲಿ ಪಾಟ್ಕರ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಎರಡನ್ನೂ ಶಿಕ್ಷೆಯಾಗಿ ಪಡೆಯಬಹುದು.

ನರ್ಮದಾ ಬಚಾವೋ ಆಂದೋಲನ ವಿರುದ್ಧ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಪಾಟ್ಕರ್ ಮತ್ತು ಸಕ್ಸೇನಾ 2000 ರಿಂದ ಕಾನೂನು ಹೋರಾಟದಲ್ಲಿ ತೊಡಗಿದ್ದರು.ಸಕ್ಸೇನಾ ಆಗ ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದರು. ಟಿವಿ ಚಾನೆಲ್‌ನಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ, ಅವಹೇಳನಕಾರಿ ಪತ್ರಿಕಾ ಪ್ರಕಟಣೆ ನೀಡಿದ ಕಾರಣಕ್ಕಾಗಿ ಸಕ್ಸೇನಾ ಅವರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next