Advertisement
ಹೀಗಾಗಿ ಯಾವುದೇ ಸಂಧರ್ಭದಲ್ಲಿ ಅನ್ಯಾಯಗಳಾದ ಸಂಧರ್ಭ ನ್ಯಾಯಕ್ಕಾಗಿ ನ್ಯಾಯಾಲಯದ ಕದ ತಟ್ಟಿರುವವರ ವಾದದಲ್ಲಿ ಸತ್ಯ, ಪ್ರಾಮಾಣಿಕತೆಗಳಿದ್ದರೆ, ಸಂವಿಧಾನಾತ್ಮಕ ಅಂಶಗಳಿದ್ದರೆ, ವಾದಕ್ಕೆ ಪುಷ್ಟಿ ನೀಡಬಲ್ಲ ದಾಖಲೆ ಅಥವಾ ಪುರಾವೆ ಮಾದರಿಗಳಿದ್ದರೆ ಅಗತ್ಯವಾಗಿ ನ್ಯಾಯಾಂಗದ ಮೇಲೆ ವಿಶ್ವಾಸವನ್ನಿಟ್ಟು ನ್ಯಾಯಬದ್ಧ ತೀರ್ಪಿಗಾಗಿ ನಿರೀಕ್ಷಿಸುವುದು ಪ್ರಬುದ್ಧತೆ.
Related Articles
Advertisement
ಹೀಗಿದ್ದಾಗ ಭವಿಷ್ಯದಲ್ಲಿ ದೇಶಕ್ಕೆ ಸಂಪನ್ಮೂಲವಾಗಬೇಕಾದ ಉತ್ಸಾಹ-ಶಕ್ತಿ-ಸಾಮರ್ಥ್ಯಗಳು ಅನಗತ್ಯವಾಗಿ ವ್ಯಯವಾಗಿ ವ್ಯರ್ಥವಾಗುತ್ತಿರುವುದು ದುರದೃಷ್ಟಕರ. ವಿದ್ಯಾರ್ಥಿ ಶಕ್ತಿ ದೇಶದ ಅಸಲೀ ಶಕ್ತಿಯ ಪ್ರತಿರೂಪ ಎಂಬುದು ಅಕ್ಷರಶಃ ಸತ್ಯ ವಿಚಾರ. ಯುವ ಸಮುದಾಯ ಭವಿಷ್ಯದ ಭಾರತವನ್ನು ಕಟ್ಟಿ ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. ಸಹನೆಯ ಕಟ್ಟೆಯೊಡೆದಾಗ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮತ್ತು ಅಸಮಾನತೆಗಳನ್ನು ಪ್ರತಿಭಟಿಸುವ ಹಕ್ಕು ವಿದ್ಯಾರ್ಥಿಗಳ ಸಹಿತ ಪ್ರತಿಯೋರ್ವ ಭಾರತೀಯ ನಾಗರಿಕನದ್ದು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಅಸಮಾನತೆ, ಅನ್ಯಾಯಗಳನ್ನು ಖಂಡಿಸಿ ವಿದ್ಯಾರ್ಥಿ ಸಮೂಹ ಬೀದಿಗಿಳಿದ ಪ್ರತೀ ಸಂಧರ್ಭದಲ್ಲಿಯೂ ದೇಶದಲ್ಲಿ ಯಶಸ್ವೀ ಬದಲಾವಣೆಗಳಾದ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಆದ್ರೆ ಆ ಶಕ್ತಿಯ ಉಪಯೋಗ ಯಾವ ಹಿತಾಸಕ್ತಿಗಾಗಿ ಆಗುತ್ತಿದೆ ಎಂಬುದರ ಅರಿವು ಇಲ್ಲಿ ನಿರ್ಣಾಯಕ. ಪ್ರಸ್ತುತ ರಾಜ್ಯದಲ್ಲಿ ಘಟಿಸುತ್ತಿರುವ ವರ್ತಮಾನಗಳ ತಾತ್ಪರ್ಯವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ ಭವಿಷ್ಯದ ಘೋರ ದಿನಗಳ ಕ್ಷಣಗಣನೆ ಆರಂಭವೆಂದೇ ಭಾಸವಾಗುತ್ತಿದೆ. ಕೆಲವೇ ಕೆಲವು ಕ್ಷುಲ್ಲಕ ಮತಾಂಧ ಮನಸ್ಥಿತಿಗಳ ಮತಾಂಧತೆ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ವಿದ್ಯಾರ್ಥಿ ಸಮುದಾಯವನ್ನು ಬಲಿಪಶುಗಳನ್ನಾಗಿಸುವುದು ಅಕ್ಷಮ್ಯ.
ಒಟ್ಟಿನಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವುದು ಎಲ್ಲ ನಾಗರಿಕರ ಜವಾಬ್ದಾರಿ. ಸಮಾಜದ ಹಿತಕ್ಕಾಗಿ, ಧರ್ಮ ಸೌಹಾರ್ದತೆಯನ್ನು ಕದಡದಂತೆ ಕಾಪಾಡುವ ನಿಟ್ಟಿನಲ್ಲಿ ಕನಿಷ್ಠ ಪ್ರಜ್ಞೆ ಅತ್ಯಗತ್ಯ.
– ಶಂತನು.ಕೆ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ