Advertisement
ಚೆನ್ನೈನ ಮರೀನಾ ಬೀಚ್, ಕೊಯಮತ್ತೂರು, ಮದುರೈ ಸೇರಿದಂತೆ ರಾಜ್ಯದೆಲ್ಲೆಡೆ ವ್ಯಾಪಕ ಪ್ರತಿಭಟನೆಗಳು ಆರಂಭವಾಗಿವೆ. ಜಲ್ಲಿಕಟ್ಟು ಸಕ್ರಮಗೊಳಿಸಿ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸುವವರೆಗೆ ಪ್ರತಿಭಟನೆಗಳು ನಿಲ್ಲುವು ದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ.
Related Articles
Advertisement
ಮರೀನಾ ಬೀಚ್‌ನಲ್ಲಿ ನಡೆದಿರುವ ಜಲ್ಲಿಕಟ್ಟು ಪ್ರತಿಭಟನೆಗೆ ಯಾವುದೇ ನಿರ್ದಿಷ್ಟ ನಾಯಕನಿಲ್ಲ. ಹಾಗಿದ್ದರೂ ಜನರು ಈ ಪ್ರತಿಭಟನಾ ತಾಣದಿಂದ ಹಿಂದೆ ಸರಿಯುತ್ತಿಲ್ಲ. ಪರಿಣಾಮವಾಗಿ ತಮಿಳುನಾಡು ಸರಕಾರ ಈಗ ಕೇಂದ್ರವನ್ನು ಸಂಪರ್ಕಿಸಿದ್ದು ಪ್ರತಿಭಟನೆಯ ಕಾವನ್ನು ಶಮನಗೊಳಿಸುವುದಕ್ಕೆ ನೆರವಾಗುವಂತೆ ಕೋರಿದೆ.
ರಾಜ್ಯ ಮೀನುಗಾರಿಕೆ ಸಚಿವ ಡಿ. ಜಯ ಕುಮಾರ್ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಕೆ ಪಾಂಡ್ಯರಾಜನ್ ಅವ ರೊಂದಿಗೆ ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ನಿರತ ಯುವಕರ ಜತೆಗೆ ಮಾತುಕತೆ ನಡೆಸಿದರು. ಆದರೆ ಸುಗ್ರೀವಾಜ್ಞೆ ಹೊರಡುವವರೆಗೆ ಪ್ರತಿಭಟನೆ ನಿಲ್ಲದೆಂದು ಪ್ರತಿಭಟನಾಕಾ ರರು ಸ್ಪಷ್ಟಪಡಿಸಿದರು.
ಕೋರ್ಟಿಂದಲೂ ಮಧ್ಯಪ್ರವೇಶ ಇಲ್ಲ: ಈ ನಡುವೆ ಜಲ್ಲಿಕಟ್ಟು ಪ್ರತಿಭಟನೆ ವಿಷಯದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ.