ಚಿಕ್ಕಮಗಳೂರು: ಹಾಸನದಲ್ಲಿ ನಡೆದ ಕೊರಿಯರ್ ಮಿಕ್ಸಿ ಸ್ಪೋಟ ಪ್ರಕರಣವು ಟೆರರಿಸಂನ ಒಂದು ಭಾಗ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಶಾರಿಕ್ ಮೂಲಕ ಕುಕ್ಕರ್ ಬ್ಲಾಸ್ಟ್ ಮಾಡಲು ಪ್ರಯತ್ನಿಸಿದರು. ಅನೇಕ ರೀತಿ ಅವರು ಮಾಡುವ ಕುಕೃತ್ಯವನ್ನು ತಡೆಯಬೇಕು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದನೆ, ಬಾಂಬ್ ಬ್ಲಾಸ್ಟ್ ಸ್ಥಬ್ಧವಾಗಿದೆ. ಅದನ್ನ ತಡೆಯಲಾಗದೆ ಅಲ್ಲಲ್ಲೇ ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದರು.
ಸಿ.ಟಿ ರವಿಗೆ ಧನ್ಯವಾದ: ದತ್ತಪೀಠದಲ್ಲಿ ಅರ್ಚಕರು, ರುದ್ರಾಭಿಷೇಕ, ಶಂಖನಾದ, ಆರತಿ ನೋಡಿ ಧನ್ಯನಾದೆ. ಸರ್ಕಾರ ಹಾಗೂ ಶಾಸಕ ಸಿ.ಟಿ.ರವಿಗೆ ಧನ್ಯವಾದಗಳು ಎಂದು ಮುತಾಲಿಕ್ ಹೇಳಿದರು.
ಇದನ್ನೂ ಓದಿ:ಅಂತ್ಯಸಂಸ್ಕಾರದಲ್ಲಿ ಪಟಾಕಿ ಹೊಡೆಯುವ ವೇಳೆ ಅಗ್ನಿ ಅವಘಡ: ಸುಟ್ಟು ಕರಕಲಾದ ಆರು ಬೈಕ್ ಗಳು
30 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದ್ದು, ಅತೀವ ಸಂತೋಷವಾಗಿದೆ. ದತ್ತಪೀಠದಲ್ಲಿ ಆರತಿ, ಘಂಟೆ, ಪೂಜೆ, ರುದ್ರಾಭಿಷೇಕ, ಶಂಖನಾದ ನಡೆಯುತ್ತಿದೆ. ಇದೆಲ್ಲಾ ಇಸ್ಲಾಂಗೆ ನಿಷಿದ್ಧ, ದತ್ತಪೀಠ ಬಿಟ್ಟು ನಾಗೇನಹಳ್ಳಿಯಲ್ಲಿ ಪೂಜೆ ಮಾಡಿಕೊಳ್ಳಿ. ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬದವರಿಗೆ ಗರ್ಭಗುಡಿಗೆ ನಿಷೇಧಿಸಬೇಕು. ಖುರಾನ್ ಪ್ರಕಾರ ನಿಷಿದ್ಧ, ನೀವೂ ಹೊಗಬೇಡಿ ಎಂದು ಮುತಾಲಿಕ್ ಹೇಳಿದರು.