Advertisement
ಹೀಗೆ ಶೌರ್ಯ ಪ್ರಶಸ್ತಿ ಪಡೆದ ಪ್ರತಿಯೊಬ್ಬರ ಕಥೆಯೂ ರೋಮಾಂಚನವಾಗಿದೆ. ಪ್ರಸಕ್ತ ಸಾಲಿನಲ್ಲಿ ಧೈರ್ಯ, ಸಾಹಸ ಮೆರೆದು ಇನ್ನೊಬ್ಬರ ಜೀವ ರಕ್ಷಿಸಿದ 7 ವಿದ್ಯಾರ್ಥಿಗಳಿಗೆ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯಪಾಲ ವಜೂಭಾಯಿ ರೂಢಭಾಯಿ ವಾಲಾ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು.
Related Articles
Advertisement
ಒಂದು ಜೀವ ಕಾಪಾಡಿದೆ: ಸೆ.24ರಂದು ಶಿವಮೊಗ್ಗದ ತುಂಗಾ ಕಾಲುವೆಯಲ್ಲಿ ನವುಲೆಯ ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಈಜಾಡಿಕೊಂಡು ಆಳಕ್ಕೆ ಹೋಗುತ್ತಿದ್ದರು. ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿತು ತಕ್ಷಣವೇ ನೀರಿಗೆ ಹಾರಿದೆ. ಒಬ್ಬನನ್ನು ಮಾತ್ರ ರಕ್ಷಿಸಲು ಸಾಧ್ಯವಾಯ್ತು. ಇನ್ನೊಬ್ಬನ್ನು ಜೀವ ಉಳಿಸಲಾಗಲಿಲ್ಲ. ಎಂದು ಶಿವಮೊಗ್ಗ ತ್ರಿಮೂರ್ತಿ ನಗರದ 14 ವರ್ಷದ ಕೃಷ್ಣ ನಾಯ್ಕ ಹೇಳಿದರು.
ಜೀವ ಕಳೆದು ಕೊಂಡ ಬಾಲಕಿ: ಮೇ 13ರಂದು ಹುನಗುಂದದ ಬಲಕುಂದಿಯ ಕ್ವಾರಿಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಅಲ್ಲೇ ಪಕ್ಷದಲ್ಲಿ ಈಜಾಡುತ್ತಿದ್ದ ಮಾವನ ಮಕ್ಕಳು ಅಪಾಯದಲ್ಲಿದ್ದನ್ನು ಗಮನಿಸಿ ಕ್ವಾರಿಗೆ ಇಳಿದ ನೇತ್ರಾವತಿ ಚವ್ಹಾನ್, ಒಬ್ಬನನ್ನು ರಕ್ಷಿಸಿ, ಇನ್ನೊಬ್ಬನ್ನು ರಕ್ಷಿಸಲು ಹೋದಾಗ ಆತ ಪ್ರಾಣಭಯದಿಂದ ಅವಳ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಪರಿಣಾಮ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಜೀವ ರಕ್ಷಿಸಲು ಹೋಗಿ ತನ್ನ ಜೀವವನ್ನೇ ಕಳೆದು ಕೊಂಡ 15 ವರ್ಷದ ನೇತ್ರಾವತಿ ಚವ್ಹಾನ್, ನೀರಿನ ಡ್ರಂಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಚಾಮರಾಜ ಜಿಲ್ಲೆಯ ಜುನೇರಾ ಹರಂ, ಗೋಬರ್ ಗ್ಯಾಸ್ ಗುಂಡಿಗೆ ಬಿದ್ದ ಬಾಲಕನ್ನು ರಕ್ಷಿಸಿದ ಶಿಡ್ಲಘಟ್ಟದ ದೀಕ್ಷಿತಾ ಮತ್ತು ಅಂಬಿಕಾಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮತ್ತಿಕೆರೆಯ ಸ್ವರ್ಶ ಟ್ರಸ್ಟ್, ಚಾಮರಾಜನಗರದ ದೀನಬಂಧು ಸಂಸ್ಥೆ, ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ. ಬೀದರ್‌ನ ಅರಳು ಸಂಸ್ಥೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರಿಗೆ ಮಕ್ಕಳ ಕಲ್ಯಾಣ ಪ್ರಶಸ್ತಿ ನೀಡಲಾಯಿತು. ಕ್ರೀಡೆ, ಕಲೆ, ಸಂಗೀತ, ಸಮಾಜ ಸೇವೆಯಲ್ಲಿ ಅಸಾಧಾರಣ ಪ್ರತಿಭೆ ಹೊಂದಿದ್ದ 35 ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಉಮಾಶ್ರೀ, ಸಂಸದ ಪಿ.ಸಿ.ಮೋಹನ್, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ, ಬಾಲ ಭವನ ಸೊಸೈಟಿ ಅಧ್ಯಕ್ಷೆ ಡಾ. ಅಂಜಲಿ ನಿಂಬಾಳ್ಕರ್ ಮೊದಲಾದವರು ಹಾಜರಿದ್ದರು.