Advertisement

ನೆರೆ ಪರಿಹಾರಕ್ಕೆ ಆಗ್ರಹಿಸಿ ದಂಪತಿ ಧರಣಿ

10:30 PM Nov 06, 2020 | sudhir |

ಹಾನಗಲ್ಲ: ನೆರೆ ಹಾವಳಿಗೆ ಬಿದ್ದುಹೋದ ಮನೆಗೆ ಸರಕಾರದಿಂದ ಪರಿಹಾರ ಬರುವ ಭರವಸೆ ಮೇಲೆ ಮನೆ ನಿರ್ಮಾಣಕ್ಕೆ
ಮುಂದಾದ ತಾಲೂಕಿನ ಮಾಸನಕಟ್ಟಿ ಗ್ರಾಮದ ಫಲಾನುಭವಿ ದಂಪತಿ, ಪರಿಹಾರಕ್ಕಾಗಿ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದರು. ಗುರುವಾರ ತಹಶೀಲ್ದಾರ ಕಚೇರಿ ಎದುರು ತಾಲೂಕಿನ ಮಾಸನಕಟ್ಟಿ ಗ್ರಾಮದ ದ್ಯಾಮವ್ವ ಬಾರಿಗಿಡದ ಹಾಗೂ ದೇವೇಂದ್ರಪ್ಪ ಬಾರಿಗಿಡದ ಧರಣಿ ನಡೆಸಿದರು. ಈ ಮೊದಲು ಹತ್ತಾರು ಬಾರಿ ತಾಲೂಕು ತಹಶೀಲ್ದಾರ್‌ ಹಾಗೂ ಗ್ರಾಮ ಪಂಚಾಯತಿಗೆ ಮನವಿ ನೀಡಿದ್ದರೂ ಯಾವುದೇ ಫಲ ನೀಡದ ಕಾರಣ ಅನಿವಾರ್ಯವಾಗಿ ಧರಣಿ ನಡೆಸುತ್ತಿರುವುದಾಗಿ ಹೇಳಿದರು.

Advertisement

ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಗೆ ಬಿದ್ದುಹೋದ ಮನೆಗೆ 5 ಲಕ್ಷ ರೂ. ಕೊಡುವುದಾಗಿ ಸರಕಾರ ಘೋಷಿಸಿತ್ತು. ಈ ದಂಪತಿ ಅದರ ಫಲಾನುಭವಿಯಾಗಿದ್ದರು. ಆದರೆ ಇದರಲ್ಲಿ ಕೇವಲ ಒಂದು ಲಕ್ಷ ನೀಡಿ ಕಂದಾಯ ಇಲಾಖೆ ಕೈತೊಳೆದುಕೊಂಡಿತ್ತು.
ತಾಂತ್ರಿಕ ದೋಷಗಳಿಂದ ಪರಿಹಾರ ನೀಡಲಾಗದು ಎಂದು ಅಧಿ ಕಾರಿಗಳು ಹೇಳಿದ್ದರಿಂದ ನ್ಯಾಯಕ್ಕಾಗಿ ಧರಣಿ
ಕುಳಿತಿರುವುದಾಗಿ ದೇವೆಂದ್ರಪ್ಪ ಬಾರಿಗಿಡದ ಹಾಗೂ ಪತ್ನಿ ದ್ಯಾಮವ್ವ ಬಾರಿಗಿಡದ ತಿಳಿಸಿದರು.

ಧರಣಿಗೆ ಸ್ಪಂದಿಸಿದ ತಹಶೀಲ್ದಾರ್‌ ಪಿ.ಎಸ್‌.ಎರ್ರಿಸ್ವಾಮಿ, ಅವರು ಕಟ್ಟಿಕೊಳ್ಳುತ್ತಿರುವ ಮನೆಯ ಜಾಗದ ಬಗೆಗೆ ದಾಖಲಾತಿ ಗೊಂದಲಗಳಿರುವುದರಿಂದ ಪರಿಹಾರ ಧನ ನೀಡಲಾಗಿಲ್ಲ. ಅವರೇ ನೀಡಿದ ದಾಖಲೆಗಳು ಪರಿಹಾರ ನೀಡಲು ಅನಾನುಕೂಲವಾಗಿವೆ. ಇನ್ನೂ ಪರಿಶೀಲಿಸಿ ನ್ಯಾಯ ಒದಗಿಸಿಕೊಡಲು ಮುಂದಾಗುತ್ತೇವೆ. ಈ ಪ್ರಕರಣವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುತ್ತದೆ. ಹಾಗಾಗಿ, ಧರಣಿ ಕೈಬಿಡುವಂತೆ ಮನವಿ ಮಾಡಿದರು. ತಹಶೀಲ್ದಾರ್‌ ಆಶ್ವಾಸನೆಗೆ ಒಪ್ಪಿದ ದಂಪತಿ ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next