Advertisement
ಕಾಕರಾಮನಹಳ್ಳಿ ಗ್ರಾಮದ ರೈತ ಚಿಕ್ಕಮರಿಯಣ್ಣ ಮತ್ತು ಅವರ ಪತ್ನಿ ಸಾಕಮ್ಮ ಈ ಪ್ರಯತ್ನ ಆರಂಭಿಸಿದ್ದಾರೆ. ತಮ್ಮ ಸ್ವಂತ ಕಟ್ಟಡವೊಂದರಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿ, ಅಧ್ಯಯನಕ್ಕೆ ಟೇಬಲ್‌ಗಳು, ಕುರ್ಚಿಗಳನ್ನು ಅಳವಡಿಸಿದ್ದಾರೆ. ಈ ವ್ಯವಸ್ಥೆಗೆ ದಂಪತಿ ಈಗಾಗಲೆ ಸಾವಿರಾರು ರೂ. ವೆಚ್ಚ ಮಾಡಿದ್ದಾರೆ. ಅಭ್ಯ ರ್ಥಿಗಳು ಈ ವ್ಯವಸ್ಥೆಯನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.
Related Articles
Advertisement
ಸ್ಮಾರ್ಟ್ ಕ್ಲಾಸ್‌ಗೆ ಚಿಂತನೆ: ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಪುಸ್ತಕಗಳ ಜೊತೆಗೆ ಜಾಲತಾಣಗಳಲ್ಲಿ ಲಭ್ಯವಾಗುವ ಮಾಹಿತಿಯನ್ನು ಅಭ್ಯರ್ಥಿಗಳಿಗೆ ಒದಗಿಸುವ ಆಲೋಚನೆ ಈ ದಂಪತಿಗಿದೆ. ಜಾಲ ತಾಣಗಳಲ್ಲಿ ಆನ್‌ಲೈನ್ ಕೋಚಿಂಗ್ ತರಗತಿಗಳು ನಡೆಯುತ್ತವೆ. ಈ ತರಗತಿಗಳನ್ನು ಇಲ್ಲಿರುವ ವಿದ್ಯಾ ರ್ಥಿಗಳಿಗೆ ಬಿತ್ತರಿಸುವ ವ್ಯವಸ್ಥೆ ಸ್ಮಾರ್ಟ್ ಕ್ಲಾಸ್ ರೂಂ ಸ್ಥಾಪನೆಗೂ ದಂಪತಿ ಚಿಂತನೆ ನಡೆಸಿದ್ದಾರೆ.
ಈ ಭಾಗದ ವಿದ್ಯಾರ್ಥಿಗಳು ಸಾಮೂಹಿಕವಾಗಿ ಆನ್ ಲೈನ್ ತರಗತಿಗಳಲ್ಲಿ ಭಾಗವಹಿಸಿ, ಪರಸ್ಪರ ಚರ್ಚೆ ಮಾಡಲು ಅನುಕೂಲವಾಗುತ್ತದೆ ಎಂದು ಉದ್ದೇಶಿಸಿದ್ದಾರೆ. ಈ ವ್ಯವಸ್ಥೆಯ ಸ್ಥಾಪ ನೆಗೂ ಅವರು ಆಸಕ್ತ ರಿಂದ ಸಹಕಾರ ಬಯಸಿದ್ದಾರೆ.
ತಜ್ಞರಿಗೆ ಆಹ್ವಾನ: ಹಳ್ಳಿಗಾಡಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿ ಸಲು ಅನುಕೂಲವಾಗುವಂತೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿ ಉನ್ನತ ಹುದ್ದೆ ಗಳಲ್ಲಿರುವ ಅಧಿಕಾರಿಗಳು ಮತ್ತು ಖಾಸಗಿ ವಲಯದಲ್ಲಿರುವ ಆಸಕ್ತರನ್ನು ಆಹ್ವಾನಿಸಿ, ಇಲ್ಲಿಗೆ ಬರುವ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಸಲಹೆಗಳನ್ನು ಕೊಡಸುವ ಉದ್ದೇಶವನ್ನು ದಂಪತಿ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ತರಬೇತಿ ಪಡೆಯಲು ವ್ಯವಸ್ಥೆಯ ಕೊರತೆಯಿಂದಾಗಿ ವಂಚಿತರಾಗಬಾರದು ಎಂಬುದಷ್ಟೇ ತಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
ಈ ಗ್ರಂಥಾಲಯ ಎಲ್ಲಿದೆ? : ಬಿಡದಿ ಪಟ್ಟಣದಿಂದ ಕೇವಲ ಐದು ಕಿ.ಮೀ ದೂರದಲ್ಲಿ ಕಾಕರಾಮನಹಳ್ಳಿ ಗ್ರಾಮವಿದೆ. ಗ್ರಾಮದಲ್ಲಿ ಬಿಡದಿ-ಗಾಣಕಲ್ ಮುಖ್ಯರಸ್ತೆಯ ಮಗ್ಗುಲಲ್ಲೇ ಗ್ರಂಥಾಲಯ ಕಟ್ಟಡವಿದೆ. ಬಿಡದಿಯ ನಲ್ಲಿಗುಡ್ಡೆಕೆರೆ ಮಾರ್ಗವಾಗಿ ಶೆಟ್ಟಿಗೌಡನದೊಡ್ಡಿ, ಎಂ.ಕರೇನಹಳ್ಳಿ ಮುಖೇನ ಕಾಕರಾಮನಹಳ್ಳಿ ಗ್ರಾಮವನ್ನು ತಲುಪಬಹುದು. ಬಿಡದಿಯಿಂದ ಸಾರಿಗೆ ಸಂಸ್ಥೆ ಬಸ್ ಸೌಲಭ್ಯವೂ ಉತ್ತಮವಾಗಿದೆ. ಹೆಚ್ಚಿನ ಮಾಹಿತಿಗಾಗಿ 8310175517 ಸಂಖ್ಯೆ ಸಂಪರ್ಕಿಸಬಹುದಾಗಿದೆ.