Advertisement

ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆ ಯತ್ನ: ಪತಿ ಸ್ಥಳದಲ್ಲೇ ಸಾವು, ಪತ್ನಿ ಗಂಭೀರ

12:23 PM Feb 04, 2021 | Team Udayavani |

ಬೆಳಗಾವಿ: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ದಂಪತಿಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.

Advertisement

ನಗರದ ಒಂದನೇ ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿದೆ.  ಮೃತ ವ್ಯಕ್ತಿಯನ್ನು ಹಿಂಡಲಗಾ ಗ್ರಾಮದ ರಾಕೇಶ ಪಾಟೀಲ ಗುರುತಿಸಲಾಗಿದೆ. ಪತ್ನಿ ಅಸ್ಮಿತಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಧರಂ ಸಿಂಗ್‌ ಸಂಬಂಧಿ ಕೊಲೆ ಪ್ರಕರಣ: ಮಲತಾಯಿಯಿಂದಲೇ ಸುಪಾರಿ!

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯು ಮರಾಠಾ ದಿನಪತ್ರಿಕೆಯ ಮುದ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಪ್ರಾಥಮಿಕ ಮೂಲಗಳ ಪ್ರಕಾರ ದಂಪತಿಗಳ ನಡುವೆ ಬುಧವಾರ ರಾತ್ರಿ ಜಗಳವಾಗಿದೆ. ಕೊನೆಗೆ ಇಬ್ಬರೂ ಟಿಳಕವಾಡಿ ಒಂದನೇ ಗೇಟ್ ಬಳಿ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಆಗ ರಾಕೇಶ ಪಾಟೀಲ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

Advertisement

ಇದನ್ನೂ ಓದಿ: ಮರಕ್ಕೆ ಢಿಕ್ಕಿ ಹೊಡೆದ ಕಾರು: ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ

ಸುದ್ದಿ ತಿಳಿದ ತಕ್ಷಣ ಬೆಳಗಾವಿ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next