Advertisement
ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದ ಸಿಂಧುವಳ್ಳಿಯ ಗುರುಮೂರ್ತಿ (43) ಹಾಗೂ ಅದೇ ಗ್ರಾಮದ ನೇತ್ರಳ್ಳಿ ನಿವಾಸಿ ರಮೇಶ್ ಮೊಗವೀರ ಅವರ ಪತ್ನಿ ಶಾರದಾ (30) ಆತ್ಮಹತ್ಯೆ ಮಾಡಿಕೊಂಡವರು.
Related Articles
Advertisement
ಶಾಸ್ತ್ರೀ ಸರ್ಕಲ್ ಸಮೀಪದ ಹೊಟೇಲ್‌ಸೆ. 26ರಂದು ಬಂದ ಅವರು ದಂಪತಿಯೆಂದು ಮಾಹಿತಿ ನೀಡಿ ಕೊಠಡಿ ಪಡೆದಿದ್ದರು. ಸೆ. 29ರಂದು ರಾತ್ರಿ 10 ಗಂಟೆಯ ಬಳಿಕ ರವಿವಾರ ಬೆಳಗ್ಗಿನ ನಡುವೆ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಎಡಿಶನಲ್ ಎಸ್ಪಿ ಕುಮಾರ ಚಂದ್ರ ಭೇಟಿ ನೀಡಿದರು. ಎಸ್‌ಐ ಹರೀಶ್ ಆರ್. ನಾಯ್ಕ, ಪೊಲೀಸ್ ಸಿಬಂದಿ ಚೇತನ್ ಮತ್ತಿತರರು ಭೇಟಿ ನೀಡಿ, ಮೃತದೇಹವನ್ನು ಹೊರತೆಗೆಯಲು ಸಹಕರಿಸಿದರು. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಎರಡೂ ಕಡೆಯವರಿಗೂ ಮೃತದೇಹ ವನ್ನು ಹಸ್ತಾಂತರಿಸಲಾಯಿತು.
ಇಬ್ಬರೂ ವಿವಾಹಿತರುಇಬ್ಬರೂ ವಿವಾಹಿತರಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ. ಗುರುಮೂರ್ತಿ ಕೃಷಿಕರಾಗಿದ್ದು 8 ವರ್ಷದ ಹೆಣ್ಣು ಮಗುವಿದ್ದರೆ, ಗೃಹಿಣಿಯಾಗಿರುವ ಶಾರದಾ ಅವರಿಗೆ ರಮೇಶ್ ಅವರೊಂದಿಗೆ 10 ವರ್ಷದ ಹಿಂದೆ ವಿವಾಹವಾಗಿದ್ದು, 8 ವರ್ಷದ ಹೆಣ್ಣು ಮಗುವಿದೆ. ಪತಿ ವಿರುದ್ಧ ದೂರು
ಕೊಠಡಿಯಲ್ಲಿ ಶಾರದಾ ಬರೆದಿಟ್ಟಿದ್ದ ಡೆತ್‌ನೋಟ್ ಲಭಿಸಿದ್ದು, “ನನ್ನ ಸಾವಿಗೆ ಗಂಡನ ಕಿರುಕುಳವೇ ಕಾರಣ’ ಎಂಬ ಉಲ್ಲೇಖವಿದೆ. ಅದರಂತೆ ಆಕೆಯ ಸಹೋದರ ರಮೇಶ್ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಪತಿ ರಮೇಶ್ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ ದಾಖಲಾಗಿದೆ.