ತಮಿಳುನಾಡು ಮೂಲದ ರಾಜ್‌ಕುಮಾರ್ (35) ಹಾಗೂ ಪತ್ನಿ ಸಂಗೀತಾ (27) ಬಸ್ಸಿನಲ್ಲಿಯೇ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಮುಂದಾದವರು.
Advertisement
Related Articles
Advertisement
ಬಸ್ಸಿನಲ್ಲಿ ಏನಾಯಿತು?ಕೊಲ್ಲೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಎಕೆಎಂಎಸ್ ಖಾಸಗಿ ಬಸ್ಸಿನಲ್ಲಿ ಈ ದಂಪತಿಯು ಮಗುವಿನೊಂದಿಗೆ ಕೊಲ್ಲೂರಿನಲ್ಲಿ ಬಸ್ ಹತ್ತಿದ್ದು, ಉಡುಪಿಗೆ ಟಿಕೇಟು ಪಡೆದಿದ್ದರು. ಬಸ್‌ನಲ್ಲಿದ್ದವರು ಹೇಳುವ ಪ್ರಕಾರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇವರು ವಂಡ್ಸೆ ಆಸುಪಾಸಿನಲ್ಲಿ ಕೀಟ ನಾಶಕ ಸೇವಿಸಿರಬಹುದು. ಕಟ್‌ಬೆಲೂ¤ರು ಸಮೀಪ ಬರುವಾಗ ಇಬ್ಬರು ಸೀಟಿನಿಂದ ಕೆಳಕ್ಕೆ ಬಿದ್ದು ಹೊರಳಾಡಿ, ಬಳಿಕ ಇಬ್ಬರೂ ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಗಮನಿಸಿದ ನಿರ್ವಾಹಕ ಚಾಲಕನಿಗೆ ತಿಳಿಸಿದ್ದು, ಕೂಡಲೇ ಅಲ್ಲಿಂದ ಪ್ರಯಾಣಿಕರೊಂದಿಗೆಯೇ ಎಲ್ಲಿಯೂ ಬಸನ್ನು ನಿಲ್ಲಿಸದೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೂ ತುರ್ತು ಚಿಕಿತ್ಸೆ ನೀಡಲಾಗಿದ್ದು, ಆದರೆ ಇಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ| ಮಧುಸೂದನ್ ನಾಯಕ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಂದಾಪುರದ ಮಂಡಲದ ಬಿಜೆಪಿ ಮುಖಂಡ ಶಂಕರ ಅಂಕದಕಟ್ಟೆ ಹಾಗೂ ಸಾರ್ವಜನಿಕರು, ಮತ್ತಿತರರು ಆಗಮಿಸಿ ತುರ್ತು ಕ್ರಮಕೈಗೊಳ್ಳುವಲ್ಲಿ ಸಹಕರಿಸಿದರು. ಮಾನವೀಯತೆ ಮೆರೆದ ಬಸ್ ಚಾಲಕ, ನಿರ್ವಾಹಕ
ದಂಪತಿ ಬಸ್ಸಿನಲ್ಲಿಯೇ ಕೀಟ ನಾಶಕ ಸೇವಿಸಿ, ಹೊರಳಾಡುತ್ತಿದ್ದನ್ನು ಬಸ್ ನಿರ್ವಾಹಕ ಸತೀಶ್ ಹಾಗೂ ಇತರೆ ಪ್ರಯಾಣಿಕರು ಕಟ್ ಬೆಲೂ¤ರು ಸಮೀಪ ನೋಡಿದ್ದು, ಕೂಡಲೇ ಅವರು ಬಸ್ ಚಾಲಕ ಇಕ್ಭಾಲ್ ಗಮನಕ್ಕೆ ತರುತ್ತಾರೆ. ಅಲ್ಲಿಂದ ಹೆಮ್ಮಾಡಿ, ತಲ್ಲೂರು, ಕುಂದಾಪುರ ಬಸ್ ನಿಲ್ದಾಣಗಳಲ್ಲಿ ಎಲ್ಲಿಯೂ ಬಸನ್ನು ನಿಲ್ಲಿಸದೇ, ಪ್ರಯಾಣಿಕರನ್ನು ಇಳಿಸದೇ, ನೇರವಾಗಿ ಹೆಡ್‌ಲೈಟ್ ಹಾಕಿ, ತ್ವರಿತಗತಿಯಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿ, ಆಪತ್ಭಾಂಧವನಾಗಿ ಕಾಣಿಸಿಕೊಳ್ಳುತ್ತಾರೆ. ಸರಕಾರಿ ಆಸ್ಪತ್ರೆ ವೈದ್ಯರಿಗೂ ಮೊದಲೇ ಮಾಹಿತಿ ನೀಡಿದ್ದು, ಇದಲ್ಲದೆ ಚಾಲಕ ಇಕ್ಬಾಲ್ ಅವರು ಆಂಬುಲೆನ್ಸ್‌ನಲ್ಲಿ ಆ ಮಗುವನ್ನು ಹಿಡಿದುಕೊಂಡೇ ಉಡುಪಿಯ ಅಜ್ಜರಕಾಡಿನ ಆಸ್ಪತ್ರೆವರೆಗೂ ಪ್ರಯಾಣಿಸಿದ್ದು, ಚಾಲಕ ಹಾಗೂ ನಿರ್ವಾಹಕರ ಮಾನವೀಯ ನಡೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.