Advertisement
ಬೆಳಾಲು ಗ್ರಾಮದ ಎಂಜಿರಿಗೆ ವಿಮಲಾ ಸಂಜೀವಿನಿ ಸ್ವಸಹಾಯ ಗುಂಪಿನಿಂದ ಸಾಲವಾಗಿ ಪಡೆದ ಮೊತ್ತದಿಂದ ತಮ್ಮ ಒಂದು ಎಕ್ರೆಯಲ್ಲಿ ಸುಮಾರು 10 ಬಗೆಯ ತರಕಾರಿ ಬೆಳೆದು ಜೀವನ ನಿರ್ವಹಣೆಗೊಂದು ಮಾರ್ಗ ಕಂಡುಕೊಂಡಿದ್ದಾರೆ.
ಹಾಲು ಬೆಂಡೆ ತಳಿಯ 500 ಗಿಡ ನಾಟಿ ಮಾಡಿದ್ದು ಉತ್ತಮ ಫಸಲು ಪಡೆದಿದ್ದಾರೆ. ಬಲಾ°ಡ್ ತಳಿಯ 500 ಬದನೆ ಗಿಡ, 65 ಊರಿನ ಬದನೆ ಗಿಡ ನಾಟಿ ಮಾಡಿದ್ದಾರೆ. 300 ಮುಳ್ಳು ಸೌತೆ ಗಿಡ, 500 ಅಲಸಂಡೆ ಬುಡ ಹಾಕಿದ್ದಾರೆ. ವಾರಕ್ಕೆ 10 ಸಾವಿರ ರೂ. ಆದಾಯ
ಬಲಾ°ಡ್ ತಳಿಯ ಬದನೆಗೆ 40 ರೂ., ಹಾಲು ಬೆಂಡೆಕಾಯಿ 70 ರೂ., ಅಲಸಂಡೆ 40 ರೂ. ನಂತೆ ಮಾರುಕಟ್ಟೆಗೆ ನೀಡುತ್ತಾರೆ. ವಾರಕ್ಕೆ ಸರಿಸುಮಾರು 10,000 ರೂ. ನಂತೆ ಪಡೆಯುತ್ತಿದ್ದು, ಪ್ರಸಕ್ತ 2 ಲಕ್ಷ ರೂ. ಅಂದಾಜು ಲಾಭದ ಆದಾಯ ನಿರೀಕ್ಷಿಸಿದ್ದಾರೆ. ಸ್ನೇಹ ಸಂಜೀವಿನಿ ಎಂಬ ಗುಂಪಿನಡಿ ವಿಮಲಾ ಅವರು ಸಂಜೀವಿನಿ ಯೋಜನೆಯಡಿ ಸ್ನೇಹಸಂಜೀವಿನಿ ಎಂಬ 10 ಮಂದಿಯಿರುವ ಗುಂಪೊಂದಿದೆ. ಅದರಿಂದ 50 ಸಾವಿರ ರೂ. ಸಾಲ ಪಡೆದು ತಾವು ಬೆಳೆದ ತರಕಾರಿ ಬೆಳೆಯಿಂದ ವಾರಕ್ಕೆ 600 ರೂ. ನಂತೆ ಸಂದಾಯ ಮಾಡಿ ಉಳಿದ ಹಣದಿಂದ ಕುಟುಂಬ ನಿರ್ವಹಣೆ ನಡೆಸುತ್ತಿದ್ದಾರೆ.
Related Articles
Advertisement
9 ಲಕ್ಷ ರೂ. ಸಾಲ“ಸಂಜೀವಿನಿ’ ಮಹಿಳಾ ಸ್ವ ಸಹಾಯ ಗುಂಪುಗಳನ್ನು ಆಧಾರ ವಾಗಿಸಿ ಅನುಷ್ಠಾನಗೊಳ್ಳುತ್ತಿರುವ ಯೋಜನೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದೇ ಇದರ ಮೂಲ ಉದ್ದೇಶ. ಬೆಳ್ತಂಗಡಿ ತಾಲೂಕಿನಲ್ಲಿ 126 ಸಂಜೀವಿನಿ ಸ್ವಸಹಾಯ ಗುಂಪುಗಳಿವೆ. ಬೆಳಾಲು ಗ್ರಾಮವೊಂದಕ್ಕೆ ಈ ಬಾರಿ ತರಕಾರಿ ಬೆಳೆಗೆ 6 ಗುಂಪುಗಳಿಗೆ 9 ಲಕ್ಷ ರೂ.ಸಾಲ ಒದಗಿಸಲಾಗಿದೆ.
-ಎಚ್.ಆರ್.ನಾಯಕ್, ಸಹಾಯಕ ಯೋಜನಾಧಿಕಾರಿ, ಜಿ.ಪಂ.