Advertisement

16 ಗಂಟೆಗಳ ಬಳಿಕ ನಡುಗಡ್ಡೆಯಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ

09:52 AM Oct 22, 2019 | keerthan |

ಹುಬ್ಬಳ್ಳಿ: ರವಿವಾರ ಸಂಜೆಯಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ತುಪ್ಪರಿ ಹಳ್ಳದ‌ ನಡುಗಡ್ಡೆಯಲ್ಲಿ ಸಿಲುಕಿಕೊಂಡು ರಾತ್ರಿಯೆಲ್ಲಾ ಕಳೆದದ್ದ ದಂಪತಿಗಳಿಬ್ಬರನ್ನು ರಕ್ಷಿಸಲಾಗಿದೆ

Advertisement

ನವಲಗುಂದ ತಾಲೂಕಿನ ಜವೂರ ಗ್ರಾಮದ ಬಳಿ ಘಟನೆ ನಡೆದಿದೆ. ಪ್ರಕಾಶ ಅಂಗಡಿ ಮತ್ತು ಸವಿತಾ ಎನ್ನುವ ದಂಪತಿಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡು ರಾತ್ರಿ ಕಳೆದವರು.

ಧಾರವಾಡ, ಕಿತ್ತೂರು ಭಾಗದಿಂದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮಳೆ ನಿಂತರೂ ಹರಿವಿನ ಪ್ರಮಾಣ  ತಗ್ಗದ  ಕಾರಣ ರಾತ್ರಿಯಿಡಿ‌ ದಂಪತಿಗಳು ಟ್ರ್ಯಾಕ್ಟರಿನಲ್ಲಿ ಕುಳಿತು ಬೆಳಗಾಗಿಸಿದ್ದಾರೆ.

ನವಲಗುಂದ ತಾಲೂಕಿನ ಜಾವೂರು ಹಾಗೂ ಬಳ್ಳೂರು ಗ್ರಾಮದ ನಡುವೆ ಎತ್ತರದ ರಸ್ತೆ ಮೇಲೆ ಉಳಿದುಕೊಡಿದ್ದರು. ರವಿವಾರ ಸಂಜೆ ಕುಸಗಲ್ಲಿನಿಂದ ಹನಸಿ ಗ್ರಾಮಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರವಾಹ ಬಂದು ನಡುವೆ ಸಿಲುಕಿಕೊಂಡಿದ್ದರು.  ಕಳೆದ16 ಗಂಟೆಗಳಿಂದ ಹಳದ ನಡುವೆ ರಕ್ಷಣೆಗೆಗಾಗಿ ಕಾದು ಕುಳಿತಿದ್ದಾರೆ.

ಜಾವೂರು ಗ್ರಾಮದ ಮೂಲಕ‌ ಆಗಮಿಸಿದ ಸಿಬ್ಬಂದಿ ದಂಪತಿಗಳನ್ನು ರಕ್ಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next