Advertisement

ಜೀವನದಲ್ಲಿ ಜಿಗುಪ್ಸೆ: ಮಕ್ಕಳನ್ನು ಕೂಡಿ ಹಾಕಿ ದಂಪತಿ ಆತ್ಮಹತ್ಯೆ

12:18 PM Nov 07, 2021 | Team Udayavani |

ಶ್ರೀರಂಗಪಟ್ಟಣ: ಮಾನಸಿಕವಾಗಿ ಬೇಸತ್ತ ದಂಪತಿಗಳು ಮಕ್ಕಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

Advertisement

ಆತ್ಮಹತ್ಯೆ ಮಾಡಿಕೊಂಡವರು, ದೇವರಾಜು(55)ಮತ್ತು ರೂಪ(45) ಎನ್ನುವ ದಂಪತಿಯಾಗಿದ್ದು, ಮಕ್ಕಳಾದ
ದರ್ಶನ್ ಮತ್ತು ಧನುಷ್ ರನ್ನು ಕೊಠಡಿಯೊಳಗೆ ಕೂಡಿ ಹಾಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳ ಚೀರಾಟ ಕೇಳಿ ಅಕ್ಕಪಕ್ಕದವರು ಬಾಗಿಲು ತೆಗೆದಾಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next