Advertisement

240Km ಅಂತರದಲ್ಲಿ ಸೇನಾ ದಂಪತಿ ಆತ್ಮಹ*ತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ ಪತ್ರ

04:37 PM Oct 17, 2024 | Team Udayavani |

ಆಗ್ರಾ: ಪರಸ್ಪರ 250 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದ ಸೇನಾ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

Advertisement

ಪತಿ ದೀನ ದಯಾಳ್ ದೀಪ್ ಭಾರತೀಯ ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದರೆ, ಪತ್ನಿ ರೇಣು ತನ್ವಾರ್ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರೂ ಆಗ್ರಾದಲ್ಲೇ ವಾಸಿಸುತ್ತಿದ್ದರು ಎನ್ನಲಾಗಿದೆ.

ಏನಿದು ಪ್ರಕರಣ:
ದೀನ ದಯಾಳ್ ದೀಪ್ ಹಾಗೂ ರೇಣು ತನ್ವಾರ್ ಕಳೆದ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ ಇಬ್ಬರೂ ಆಗ್ರಾದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಈ ನಡುವೆ ರೇಣು ಅವರ ತಾಯಿ ಅನಾರೋಗ್ಯ ಹೊಂದಿದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದರು ಈ ನಡುವೆ ದೀನ್ ದಯಾಳ್ ಅವರು ಅಕ್ಟೋಬರ್ 14 ರ ರಾತ್ರಿ ಆಗ್ರಾದ ಅಧಿಕೃತ ನಿವಾಸದಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 15 ರಂದು ಬೆಳಗ್ಗೆ ದೀನದಯಾಳ್ ಅವರ ಮೃತದೇಹ ಪತ್ತೆಯಾಗಿತ್ತು.

ಅದೇ ದಿನ 250 ಕಿಲೋಮೀಟರ್ ದೂರದ ದೆಹಲಿಯಲ್ಲಿದ್ದ ದೀನ ದಯಾಳ್ ಅವರ ಪತ್ನಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಾಹಿತಿ ದೊರೆತ ದೆಹಲಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ರೇಣು ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಅದರಲ್ಲಿ ದೀನ್ ದಯಾಳ್ ಹಾಗೂ ನನ್ನನ್ನು ಒಂದೇ ಚಿತೆಯಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ ಆಗ್ರಾದಲ್ಲಿ ಆತ್ಮಹತ್ಯೆಗೆ ಶರಣಾದ ಪತಿಯ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎನ್ನಲಾಗಿದೆ. ಅಲ್ಲದೆ ಪತಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಪತ್ನಿ ಆತ್ಮಹತ್ಯೆಗೆ ಶರಣಾದರೇ ಎಂಬುದು ಕೂಡಾ ಅನುಮಾನ ಹುಟ್ಟಿಸಿದೆ.

Advertisement

ಎರಡು ವರ್ಷದ ಹಿಂದೆ ಮದುವೆ:
ದೀನ್ ದಯಾಳ್ ಹಾಗೂ ರೇಣು ಕಳೆದ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, ದೀನ್ ದಯಾಳ್ ದೀಪ್ ಆಗ್ರಾದ ವಾಯುನೆಲೆಯಲ್ಲಿ ಸೇವೆ ಸಲ್ಲಿಸುತಿದ್ದರೆ ಅವರ ಪತ್ನಿ ರೇಣು ಆಗ್ರಾದಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಸಹೋದ್ಯೋಗಿಗಳ ಜೊತೆ ಊಟ:
ಆತ್ಮಹತ್ಯೆಗೆ ಶರಣಾಗುವ ದಿನ ರಾತ್ರಿ ದೀನ್ ದಯಾಳ್ ತನ್ನ ಸಹದ್ಯೋಗಿಗಳ ಜೊತೆ ಊಟ ಸೇವಿಸಿದ್ದಾರೆ ಅಲ್ಲದೆ ಈ ವೇಳೆ ಅವರು ತಮಾಷೆ ಮಾಡುತ್ತಾ ಸಂತೋಷದಲ್ಲಿದ್ದರು ಅವರ ಮುಖದಲ್ಲಿ ಯಾವುದೇ ಬೇಸರದ ಕಳೆ ಇದ್ದಹಾಗೆ ಕಾಣಲಿಲ್ಲ ಎಂದು ಸಹದ್ಯೋಗಿಗಳು ಹೇಳಿದ್ದಾರೆ.

ಇದನ್ನೂ ಓದಿ: Kerala:ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಅರುಣ್‌ ಕುಮಾರ್‌ ಆಯ್ಕೆ

Advertisement

Udayavani is now on Telegram. Click here to join our channel and stay updated with the latest news.

Next