Advertisement

ಕೃಷಿಯಿಂದಲೇ ದೇಶದ ಪ್ರಗತಿ ಸಾಧ್ಯ : ಸುಧಾಕರ ನಾಯಕ್‌

07:40 AM Aug 02, 2017 | Harsha Rao |

ಉಡುಪಿ: ಕೃಷಿಯಿಂದಲೇ ದೇಶದ ಪ್ರಗತಿ ಸಾಧ್ಯ. ಆ ಕಾರಣದಿಂದ ಮಕ್ಕಳಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸಲು ವಿಜಯ ಬ್ಯಾಂಕ್‌ ವತಿಯಿಂದ ವಿವಿಧ ಶಾಲೆಗಳಲ್ಲಿ ಕೃಷಿಕ ಸಂಘಗಳನ್ನು ಪ್ರಾರಂಭಿಸಲಾಗಿದೆ ಎಂದು ಬ್ಯಾಂಕಿನ ಉಪ ಮಹಾ ಪ್ರಬಂಧಕ ಸುಧಾಕರ ನಾಯಕ್‌ ಹೇಳಿದರು.

Advertisement

ವಿಜಯ ಬ್ಯಾಂಕಿನ ಸ್ವಯಂಸೇವಾ ಸಂಸ್ಥೆ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್‌ (ಬಿವಿಟಿ) ಮಣಿಪಾಲ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ತಮ್ಮ ಪ್ರಾಂತೀಯ ಕಚೇರಿಯಲ್ಲಿ ನಡೆದ ವಿವಿಧ ಶಾಲೆಯ ಅಧ್ಯಾಪಕರಿಗೆ ವಿದ್ಯಾರ್ಥಿ ಕೃಷಿ ಸಂಘಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

ಶಿಕ್ಷಣ ಇಲಾಖೆಯ ರಾಧಾಕೃಷ್ಣ ಭಟ್‌ ಮಾತನಾಡಿ ದೇಶದ ಶೇ. 70 ರಷ್ಟು ಭಾಗ ಗ್ರಾಮೀಣ ಪ್ರದೇಶವಾಗಿದ್ದು, ಕೃಷಿಯನ್ನೇ ಅವಲಂಬಿಸಿರುವಾಗ ಮಕ್ಕಳಲ್ಲಿ ಕೃಷಿ ಅರಿವು ಮೂಡಿಸುವುದು ಅತ್ಯಂತ ಆವಶ್ಯಕವಾಗಿದೆ ಎಂದರು. 
ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೇಮನಾಥ ಆಳ್ವ, ಬಿವಿಟಿಯ ಹಿರಿಯ ಕೃಷಿ ಸಲಹೆಗಾರ ಎಚ್‌. ಅನಂತ ಪ್ರಭು, ವಿಜಯ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ವಸಂತ ರಾಜನ್‌ ಉಪಸ್ಥಿತರಿದ್ದರು.  ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ಹೆಗಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next