ನವದೆಹಲಿ: ನ.12ರಿಂದ 16ರ ಒಳಗಾಗಿ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ “ವಿಕ್ರಮ ಎಸ್’ ಉಡಾವಣೆಯಾಗಲಿದೆ ಎಂದು ಸ್ಕೈರೂಟ್ ಏರೋಸ್ಪೇಸ್ ಮಂಗಳವಾರ ಘೋಷಿಸಿದೆ.
ಹೈದರಾಬಾದ್ ಮೂಲದ ಬಾಹ್ಯಾಕಾಶ ಸ್ಟಾರ್ಟ್ ಅಪ್ ಕಂಪನಿ ಆಗಿರುವ ಸ್ಕೈರೂಟ್, “ಪ್ರಾರಂಭ’ ಯೋಜನೆಯಡಿ ಮೂರು ಗ್ರಾಹಕ ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ.
ಶ್ರೀಹರಿಕೋಟಾದಲ್ಲಿನ ಇಸ್ರೋದ ಉಡಾವಣಾ ಕೇಂದ್ರದಿಂದ “ವಿಕ್ರಮ ಎಸ್’ ಉಡಾವಣೆಯಾಗಲಿದೆ.
“ಇಸ್ರೋ ಅಧಿಕಾರಿಗಳು ನ.12ರಿಂದ 16ರ ನಡುವಿನ ದಿನಾಂಕ ನೀಡಿದ್ದಾರೆ. ಹವಾಮಾನ ಪರಿಸ್ಥಿತಿ ಗಮನಿಸಿ ಅಂತಿಮ ದಿನಾಂಕ ನಿಗದಿಪಡಿಸಲಿದ್ದಾರೆ,’ ಎಂದು ಸ್ಕೈರೂಟ್ ಸಿಇಒ, ಸಹಸಂಸ್ಥಾಪಕ ಪವನ್ ಕುಮಾರ್ ಚಂದನಾ ತಿಳಿಸಿದ್ದಾರೆ.
ಈ ಮೂಲಕ ಸ್ಕೈರೂಟ್ ಏರೋಸ್ಪೇಸ್ ಕಂಪನಿಯು ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಮಾಡುವ ಭಾರತದ ಮೊದಲ ಖಾಸಗಿ ಕಂಪನಿಯಾಗಲಿದೆ.