Advertisement

Uttarakhand: ದೇಶದ ಮೊದಲ ಹೆಲಿಕಾಪ್ಟರ್‌ ತುರ್ತು ವೈದ್ಯಕೀಯ ಸೇವೆ: ಸಿಂಧಿಯಾ

09:28 PM Feb 15, 2024 | Team Udayavani |

ಡೆಹ್ರಾಡೂನ್‌: ದೇಶದ ಮೊದಲ ಹೆಲಿಕಾಪ್ಟರ್‌ ತುರ್ತು ವೈದ್ಯಕೀಯ ಸೇವೆಯನ್ನು(ವೈದ್ಯಕೀಯ ತುರ್ತು ಪರಿಸ್ಥಿತಿಯ ವೇಳೆ ಏರ್‌ಲಿಫ್ಟ್ ಮಾಡಲು ಹೆಲಿಕಾಪ್ಟರ್‌ ಬಳಕೆ) ಉತ್ತರಾಖಂಡದಲ್ಲಿ ಆರಂಭಿಸುತ್ತಿರುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ.

Advertisement

ಆರಂಭಿಕವಾಗಿ ಡೆಹ್ರಾಡೂನ್‌ನ ಏಮ್ಸ್‌ ಆಸ್ಪತ್ರೆಯಲ್ಲಿ ಈ ಸೇವೆ ಒದಗಿಸಲಾಗುತ್ತದೆ. ಸುತ್ತಲಿನ 150ಕಿ.ಮೀ. ವರೆಗೆ ವಾಸಿಸುತ್ತಿರುವ ಜನರಿಗೆ, ವೈದ್ಯಕೀಯ ತುರ್ತು ಪರಿಸ್ಥಿತಿಯ ವೇಳೆ ಏರ್‌ಲಿಫ್ಟ್ ಮಾಡಲು ಈ ಹೆಲಿಕಾಪ್ಟರ್‌ ಬಳಕೆ ಮಾಡಲಾಗುತ್ತದೆ. ವೈದ್ಯಕೀಯ ಅಗತ್ಯತೆಗಳಿಗೆ ಅನುಗುಣವಾಗಿಯೇ ಆ್ಯಂಬುಲೆನ್ಸ್‌ಗಳ ರೀತಿಯಲ್ಲಿ ಈ ಹೆಲಿಕಾಪ್ಟರ್‌ ಅನ್ನು ಸಿದ್ಧಪಡಿಸಲಾಗಿದ್ದು, ಈ ಬಗ್ಗೆ ಪ್ರಮಾಣೀಕರಣವನ್ನೂ ಪಡೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next