ಹೊಸದಿಲ್ಲಿ: ಯಾವುದೇ ದೇಶದ ತನ್ನ ಮೂಲ ಉದ್ಯಮವು ಭಯೋತ್ಪಾದನೆಯಾಗಿದ್ದರೆ ಆ ದೇಶವು ಕಠಿಣ ಪರಿಸ್ಥಿತಿಯಿಂದ ಹೊರಬಂದು ಸಮೃದ್ಧವಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಕುಸಿಯುತ್ತಿರುವ ಆರ್ಥಿಕತೆಯ ಹೊಡೆತದಿಂದ ತತ್ತರಿಸಿರುವ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದರು.
“ಯಾವುದೇ ದೇಶವು ತನ್ನ ಮೂಲ ಉದ್ಯಮ ಭಯೋತ್ಪಾದನೆಯಾಗಿದ್ದರೆ ಎಂದಿಗೂ ಕಠಿಣ ಪರಿಸ್ಥಿತಿಯಿಂದ ಹೊರಬರಲು ಮತ್ತು ಸಮೃದ್ಧ ಶಕ್ತಿಯಾಗಲು ಆಗುವುದಿಲ್ಲ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಯೋಜಿಸಿದ್ದ ಏಷ್ಯಾ ಆರ್ಥಿಕ ಸಂವಾದದಲ್ಲಿ ಹೇಳಿದರು.
ಪಾಕಿಸ್ತಾನಕ್ಕೆ ಭಾರತ ನೆರವು ನೀಡುವ ಕುರಿತು ಮಾತನಾಡಿದ ಜೈಶಂಕರ್, ಭಯೋತ್ಪಾದನೆ ಭಾರತ-ಪಾಕಿಸ್ತಾನ ಸಂಬಂಧದ ಮೂಲಭೂತ ಸಮಸ್ಯೆಯಾಗಿದ್ದು, ಅದನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಒಂದಲ್ಲ, ಎರಡಲ್ಲ… ಹನ್ನೊಂದು! ಫೆಬ್ರವರಿ ಕೊನೆ ವಾರ ಸಿನಿ ಟ್ರಾಫಿಕ್ ಜೋರು
“ನಾನು ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಭಾವನೆ ಏನು ಎಂದು ನಾನು ನೋಡುತ್ತೇನೆ. ನನ್ನ ಜನರು ಅದರ ಬಗ್ಗೆ ಏನು ಭಾವಿಸುತ್ತಾರೆಂದು ನೋಡುತ್ತೇನೆ ಈಗ ನೆರವು ನೀಡುವ ಬಗೆಗಿನ ನಿಮ್ಮ ಪ್ರಶ್ನೆಗೆ ಉತ್ತರ ತಿಳಿಯಿತು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಪಾಕಿಸ್ತಾನದ ಭವಿಷ್ಯವು ಅದರ ಕ್ರಮಗಳು ಮತ್ತು ಆಯ್ಕೆಗಳಿಂದ ಹೆಚ್ಚಾಗಿ ನಿರ್ಧರಿಸಲ್ಪಡುತ್ತದೆ, ತನ್ನ ಆರ್ಥಿಕ ತೊಂದರೆಗಳಿಂದ ಹೊರಬರಲು ಒಂದು ಮಾರ್ಗವನ್ನು ಅವರೇ ಕಂಡುಕೊಳ್ಳಬೇಕು ಎಂದು ಜೈಶಂಕರ್ ಹೇಳಿದರು.