Advertisement

ಪ್ರಧಾನ ಮಂತ್ರಿಯ ಸಮರ್ಥ ಆಡಳಿತದಿಂದ ದೇಶ ಉನ್ನತ ಸ್ಥಾನಕ್ಕೆ

03:25 AM Jul 15, 2017 | |

ಕುಂಬಳೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ ಆಡಳಿತದಿಂದ ನಮ್ಮ ದೇಶ ಅತ್ಯುನ್ನತ ಸ್ಥಾನಕ್ಕೇರುತ್ತಿದೆ.ಶತ್ರು ರಾಷ್ಟ್ರಗಳು ಕೂಡಾ ಭಾರತದೊಂದಿಗೆ ಮಿತ್ರತ್ವಕ್ಕೆ ಮುಂದಾಗಿವೆ.ಮುಂದಿನ ಲೋಕಸಭೆ ಮತ್ತು ವಿವಿಧ ರಾಜ್ಯಗಳ ಎಲ್ಲಾ ಚುನಾವಣೆಗಳಲ್ಲೂ ವಿರೋಧ ಪಕ್ಷಗಳು ದುರ್ಬಲಗೊಂಡು ಬಿ.ಜೆ.ಪಿ. ಜಯಭೇರಿ ಗಳಿಸಲಿದೆ.ಎಂಬುದಾಗಿ ಬಿ.ಜೆ.ಪಿ.ರಾಜ್ಯ ಮಾಜಿ ಅಧ್ಯಕ್ಷ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್‌ ಹೇಳಿದರು.

Advertisement

ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ ಸಭಾಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಮೂರು ವರ್ಷದ ಕೇಂದ್ರದ ಸಮರ್ಥ ಬಿ.ಜೆ.ಪಿ.ಆಡಳಿತದಲ್ಲಿ ಹಲವಾರು ಜನಪರ ಆಡಳಿತದಿಂದ ದೇಶ ಸುಭಿಕ್ಷೆಯತ್ತ ಸಾಗುತ್ತಿದೆ.ಇನ್ನು ಮುಂದಿನ ಆಡಳಿತ ದಿನದಲ್ಲಿ ಕೇಂದ್ರ ಸರಕಾರ ಇನ್ನಷ್ಟು ಜನಕ್ಷೇಮ ಯೋಜನೆಗಳನ್ನು ಬಡವರಿಗೆ ಕೊಡುಗೆಯಾಗಿ ನೀಡಲಿದೆ. ಮುಂದಿನ ಯುಗ ಬಿಜೆ.ಪಿ. ಯುಗವಾಗಲಿದೆ ಎಂದರು.

ಕೇರಳದಲ್ಲಿ  ಮುಂದಿನ  ದಿನಗಳಲ್ಲಿ ಎಡಬಲ ಉಭಯ ರಂಗಗಳು ಪರಸಪರ ಕಚ್ಚಾಟದಿಂದ ಛಿದ್ರಗೊಳ್ಳ ಲಿವೆ. ಸಿ.ಪಿ.ಎಂ. ಜನದ್ರೋಹಿ ದುರಾಡಳಿತದಿಂದ ಆ ಪಕ್ಷದೊಳಗೆ ಅಂತಃಕಲಹ ಹೆಚ್ಚುತ್ತಿದೆ.ದೇಶದ ಏಕೈಕ ಸಿಪಿಎಂ ಆಡಳಿತ ಕೂಡ ಕೊನೆಗೊಳ್ಳಲಿದೆ. ಇಲ್ಲಿ ಮುಂದೆ ಬಿ.ಜೆ.ಪಿ. ತಾವರೆ ಅರಳಲಿದೆ ಎಂದರು.

ಬಿ.ಜೆ.ಪಿ. ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ , ಪಿ. ಸುರೇಶ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ನ್ಯಾಯವಾದಿ ವಿ. ಶ್ರೀಕಾಂತ್‌, ಉಪಾಧ್ಯಕ್ಷೆ ಸರೋಜಾ ಆರ್‌.ಬಲ್ಲಾಳ್‌, ಕಾರ್ಯದರ್ಶಿ ಪಿ. ರಮೇಶ್‌, ಪರಿಶಿಷ್ಟ ಕಾಜಿ ವರ್ಗ ಜಿಲ್ಲಾಧ್ಯಕ್ಷ ಎ.ಕೆ. ಕಯ್ನಾರ್‌, ಮಂಡಲಾಧ್ಯಕ್ಷ ಬಾಬು ಮಾಸ್ಟರ್‌, ಯುವ ಮೋರ್ಚಾ ನಾಯಕರಾದ ಎಂ. ವಿಜಯ ಕುಮಾರ್‌ ರೈ, ಸುಮಿತ್‌ ರಾಜ್‌ ಪೆರ್ಲ, ಮಹಿಳಾ ಮೋರ್ಚಾ ನಾಯಕಿಯರಾದ ಪುಷ್ಪಾ ಆಮೆಮಕ್ಕಳ, ಪ್ರೇಮಲತಾ ಎಸ್‌., ಕೆ. ಜಯಲಕ್ಷ್ಮಿ ಭಟ್‌, ಜಯಂತಿ ಟಿ. ಶೆಟ್ಟಿ,ಆಶಾಲತಾ ಮಲ್ಲಿಕಾ ರೈ ಉಪಸ್ಥಿತರಿದ್ದರು. ಮುರಳೀಧರ ಯಾದವ್‌ ಸ್ವಾಗತಿಸಿದರು. ಆದರ್ಶ್‌ ಬಿ.ಎಂ.ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next