Advertisement

ಉಪಗ್ರಹಗಳಿಗೆ ದೇಶಿ ಸೌರಕೋಶ

06:00 AM Jul 24, 2018 | |

ಹೊಸದಿಲ್ಲಿ: ಮೋದಿ ಸರಕಾರದ ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಪೂರಕವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಸ್ಯಾಟಲೈಟ್‌ಗೆ ಅಗತ್ಯವಿರುವ ಸೌರಕೋಶಗಳನ್ನು ದೇಶದಲ್ಲೇ ಉತ್ಪಾದಿಸಲಿದೆ. ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಅಮೆರಿಕದಿಂದ ಪಡೆಯಲಾಗಿದ್ದು, ಬಿಇಎಲ್‌ ನೆರವಿನಿಂದ ದೇಶದಲ್ಲೇ ಉತ್ಪಾದಿಸಲಾಗುತ್ತದೆ. ಇದರಿಂದಾಗಿ ಸೋಲಾರ್‌ ಪ್ಯಾನೆಲ್‌ಗ‌ಳ ವೆಚ್ಚವೂ ಕಡಿಮೆಯಾಗುತ್ತದೆ. ಸದ್ಯ ಅಮೆರಿಕ ದಿಂದ ಪ್ಯಾನೆಲ್‌ ಆಮದು ಮಾಡಿಕೊಳ್ಳಲಾಗು ತ್ತಿದೆ. 10 ಸಾವಿರ ಸೌರಕೋಶಗಳಿಗೆ 15 ಕೋಟಿ ರೂ. ವೆಚ್ಚ ತಗಲುತ್ತಿದೆ. ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯ ಇಂಜಿನಿಯರುಗಳ ಮೇಲ್ವಿಚಾರಣೆ ಯಲ್ಲಿ ಬಿಇಎಲ್‌ ಉತ್ಪಾದನೆ ಮಾಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next