Advertisement
ಇಲ್ಲಿನ ಪತ್ರಿಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಕೃಷಿ ಸಮ್ಮಾನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಸುಮಾರು 12 ಕೋಟಿ ರೈತರಿಗೆ 1.82 ಲಕ್ಷ ಕೋಟಿ ರೂ. ನೀಡಲಾಗಿದೆ. ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ಬೆಳೆನಷ್ಟ ಪರಿಹಾರವಾಗಿ 1.15 ಲಕ್ಷ ಕೋಟಿ ರೂ. ಪರಿಹಾರ ನೀಡಲಾಗಿದೆ. ರೈತರು ಪ್ರೀಮಿಯಂನಲ್ಲಿ ಒಟ್ಟು 21,000 ಕೋಟಿ ರೂ. ಠೇವಣಿ ಮಾಡಿದ್ದಾರೆ. ಹೀಗೆ ವಿವಿಧ ಜನಪರ ಕೆಲಸ ಮಾಡಲಾಗಿದೆ ಎಂದು ಹೇಳಿದರು.
Related Articles
Advertisement
ಯಾದಗಿರಿಯ ಗ್ರಾಮಗಳಲ್ಲಿ 2000 ಸೋಲಾರ್ ಲೈಟ್ ಹಾಕಲಾಗುವುದು. ಸಂಸದ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಜಿಲ್ಲೆಯ ಕೊಳ್ಳೂರು, ದೇವಾಪುರ ಹಾಗೂ ರಾಯಚೂರು ಜಿಲ್ಲೆಯ ಜಾಹೀರ ವೆಂಕಟರಾಪುರ, ಹೀರಾ ಹಾಗೂ ಮಟಮಾರಿ ಗ್ರಾಮಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.
ಜೆಜೆಎಂ ಯೋಜನೆಯಡಿ 1400 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು ಒದಗಿಸಲಾಗಿದೆ. ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಕೇಂದ್ರೀಯ ವಿದ್ಯಾಲಯ, ಶಹಾಪುರ ಹಾಗೂ ಸುರಪುರ ನಗರಗಳ ಬೈಪಾಸ್ ಗಳು ಆಗಬೇಕು. ಈ ಕಾಮಗಾರಿಗಳನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲಾಗುವುದು. ಯಾದಗಿರಿಯಲ್ಲಿ ವಿಭಾಗೀಯ ಕೇಂದ್ರ ಅಂಚೆ ಕಚೇರಿ ಈಗಾಗಲೇ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ವೆಂಕಟರೆಡ್ಡಿ ಮುದ್ನಾಳ, ಡಾ| ಶರಣಭೂಪಾಲರೆಡ್ಡಿ, ದೇವೇಂದ್ರನಾಥ ನಾದ್, ಗುರು ಕಾಮಾ, ವಿರೂಪಾಕ್ಷಯ್ಯಸ್ವಾಮಿ ಹೆಡಗಿಮದ್ರಿ ಸೇರಿದಂತೆ ಹಲವರಿದ್ದರು.