ಮಂಡ್ಯ: ಹುತಾತ್ಮ ವೀರಯೋಧರಿಗೆ ನೀಡುವ ದೊರಕುವಷ್ಟೇ ಗೌರವ ದೇಶ ರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ದೊರತರ ಮತಷ್ಟು ಯುವಕರು ಸೇನೆ ಸೇರಲು ಪ್ರೇರಣೆಯಾಗುತ್ತದೆ ಎಂದು ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಹೇಳಿದರು.
ಹುತಾತ್ಮ ಯೋಧರಿಗೆ ಹರಿದುಬರುವ ಎಷ್ಟೇ ಹಣವಾದರೂ ಅವರ ಪ್ರಾಣಕ್ಕೆ ಸಮನಾಗಲಾರದು. ರಾಷ್ಟ್ರಾಭಿಮಾನದ ಕೆಚ್ಚು ನಮ್ಮ ಯುವ ಪೀಳಿಗೆಯಲ್ಲಿ ಜೀವಂñವಾಗಿದ್ದರಷ್ಟೇ ಸುರಕ್ಷಿತ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ದೇಶಸೇವೆಗೆ ಉತ್ಸಾಹ ಅವಶ್ಯ: ದೇಶ ಕಾಯುವ ಯೋಧರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವೈಯಕ್ತಿಕ ಸುಖ, ಸಂತೋಷ ತೊರೆದು ಕುಟುಂಬ ವ್ಯಾಮೋಹದಿಂದ ದೂರ ಉಳಿದು ದೇಶ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಂತಹವರಿಗೂ ಗೌರವ ದೊರಕಿದಂತಾದರೆ ನಮ್ಮ ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬಿದಂತಾಗುತ್ತದೆ. ದೇಶಸೇವೆಗೆ ಇನ್ನಷ್ಟು ಉತ್ಸಾಹ, ಸ್ಫೂರ್ತಿ ಬರುತ್ತದೆ ಎಂದು ಡಾ. ಆನಂದ್ ಹೇಳಿದರು.
ಯುವಜನತೆ ಸೈನ್ಯ ಸೇರಿ: ದೇಶವನ್ನು ಧರ್ಮ ದ ಹೆಸರಿನಲ್ಲಿ ಒಡೆಯುವ ಸಲುವಾಗಿ ವಿಚ್ಛಿದ್ರ ಕಾರಕ ಶಕ್ತಿಗಳು ಅಮಾಯಕರ ಪ್ರಾಣವನ್ನು ಕುತಂತ್ರದಿಂದ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ನಮ್ಮ ಸೈನಿಕರಂತೆ ನೇರವಾಗಿ ಹೋರಾಟ ಮಾಡುವ ಶಕ್ತಿ ಇಲ್ಲ. ದೇಶದೊಳಗೆ ದುಷ್ಕೃತ್ಯ ನಡೆಸುವ ಮೂಲಕ ಅಭದ್ರತೆ ಸೃಷ್ಟಿಸುತ್ತಿರುವ ದುಷ್ಟ ಶಕ್ತಿಗಳನ್ನು ನಾಶಪಡಿಸುವುದಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಸೇರಬೇಕು. ಅವರಿಗೆ ಎಲ್ಲರೂ ಚೈತನ್ಯಶಕ್ತಿಯಾಗಬೇಕು. ಆಗ ರಾಷ್ಟ್ರÊನ್ನು ಸುಭದ್ರವಾಗಿರಿಸಲು ಸಾಧ್ಯವಾಗುವುದು ಎಂದು ತಿಳಿಸಿದರು.
Advertisement
ನಗರದ ನಿರಾಳ ಕ್ಲಿನಿಕ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಕುಟುಂಬಕ್ಕೆ ಮ್ಯಾನ್‌ಕೈಂಡ್ ಸಂಸ್ಥೆ ವತಿಯಿಂದ 2.50 ಲಕ್ಷ ರೂ. ಆರ್ಥಿಕ ನ ನೆರವು ನೀಡಿ ಅವರು ಮಾತನಾಡಿದರು.
Related Articles
Advertisement
ಚೆಕ್ ವಿತರಣೆ: ಮೃತ ವೀರಯೋಧ ಗುಡಿಗೆರೆ ಕಾಲೋನಿಯ ಗುರು ಪತ್ನಿ ಕಲಾವತಿಗೆ ಮ್ಯಾನ್‌ಕೈಂಡ್ ಫಾರ್ಮಾ ವತಿಯಿಂದ ಮಂಡ್ಯ ಯೂತ್ ಗ್ರೂಪ್ ಸಹಯೋಗದೊಂದಿಗೆ ಗೌರವ ಸನ್ಮಾನ ಮಾಡಿ 2.50 ಲಕ್ಷ ರೂ. ಚೆಕ್ ವಿತರಿಸಲಾಯಿತು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಕ್ಕೆ ತಲಾ 2.50 ಲಕ್ಷ ರೂ.ಗಳನ್ನು ಮ್ಯಾನ್‌ಕೈಂಡ್ ಸಂಸ್ಥೆ ವತಿಯಿಂದ ವಿತರಿಸ ಲಾಗಿದೆ.ಕಳೆದ ವರ್ಷ ಕೇರಳದಲ್ಲಿ ನಡೆದ ಭೀಕರ ಚಂಡಮಾರುತ ಸಮಯದಲ್ಲೂ ಮ್ಯಾನ್‌ಕೈಂಡ್ ಸಂಸ್ಥೆ 1 ಕೋಟಿ ರೂ. ನೆರವು ನೀಡಿತ್ತು. ಇದೇ ಸಂದರ್ಭದಲ್ಲಿ ಮ್ಯಾನ್‌ಕೈಂಡ್ ಫಾರ್ಮಾ ಮ್ಯಾನೇಜರ್‌ಗಳಾದ ಅಕ್ಬರ್, ಹರ್ಷದ್, ಸೈಯದ್ ಇದ್ದರು. ಮಂಡ್ಯ ಯೂತ್ ಗ್ರೂಪ್‌ನ ಉಪಾಧ್ಯಕ್ಷ ಹೆಚ್.ಎಸ್.ಮಂಜು, ದರ್ಶನ್, ವಿನಯ್, ದೇವಿ, ಕಿರಣ್, ಪ್ರತಾಪ್ ಇತರರಿದ್ದರು.