Advertisement

‘ಜಗತ್ತಿನಲ್ಲಿ ದೇಶ ಸೂಪರ್‌ ಪವರ್‌ ಆಗಬೇಕು’

02:07 PM Aug 01, 2018 | Team Udayavani |

ಪುತ್ತೂರು: ಸ್ವಚ್ಛತೆ ಕಾಪಾಡಲು ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಇದರ ಮೂಲಕ ದೇಶ ಜಗತ್ತಿನಲ್ಲಿ ಸೂಪರ್‌ ಹಾಕುವಂತೆ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಕೇಂದ್ರ ಸರಕಾರದ ಸ್ವಚ್ಛ ಭಾರತ್‌ ಮಿಶನ್‌ ಯೋಜನೆಯಡಿ ಗ್ರಾಮ ನೈರ್ಮಲ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ತಾಲೂಕಿನಾದ್ಯಂತ ಸಂಚರಿಸಲಿರುವ ಸ್ವಚ್ಛತಾ ರಥ ಯಾತ್ರೆಗೆ ಮಂಗಳವಾರ ತಾ.ಪಂ. ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

Advertisement

ಸ್ವಚ್ಛತೆ ಕಾಪಾಡಿ, ಸ್ವಚ್ಛ ಸಮಾಜ ನಿರ್ಮಾಣ ಮಾಡಲಾಗುತ್ತದೆ. ಸ್ವಚ್ಛತಾ ರಥ ಯಾತ್ರೆಯ ಮೂಲಕ ಶುಚಿತ್ವ ಕಾಪಾಡುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ರಥಯಾತ್ರೆ ಒಂದು ತಿಂಗಳ ಕಾಲ ತಾಲೂಕಿನ ಎಲ್ಲ ಗ್ರಾ.ಪಂ., ಅಲ್ಲಿನ ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ಆರೋಗ್ಯ, ಸ್ವಚ್ಛತೆ ಬಗ್ಗೆ ಜನರಿಗೆ ಮಾಹಿತಿ ನೀಡಲಿದೆ. ತಾಲೂಕಿನಲ್ಲಿರುವ ಯುವಕ, ಯುವತಿ ಮಂಡಲಗಳು ಸಹಿತ ವಿವಿಧ ಸೇವಾ ಸಂಸ್ಥೆಗಳು ಜಾಗೃತಿ ಮುಡಿಸುವ ಕೆಲಸ ಮಾಡುತ್ತಿವೆ. ಈಗ ಇಲಾಖೆ ವತಿಯಿಂದ ನಡೆಯುತ್ತಿದ್ದು, ಸ್ವಚ್ಛತೆಯಲ್ಲಿ ಪುತ್ತೂರು ತಾಲೂಕು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಶಿವರಂಜನ್‌, ಮುಕುಂದ, ಲಲಿತಾ, ಸಾಜ ರಾಧಾಕೃಷ್ಣ ಆಳ್ವ, ಜಿ.ಪಂ. ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ಕೊಡಿಪ್ಪಾಡಿ ಗ್ರಾ.ಪಂ. ಸದಸ್ಯ ಗಿರಿಧರ್‌ ಗೌಡ ಗೋಮುಖ, ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ ಕುಮಾರ್‌ ರೈ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶ್‌ ಕುಮಾರ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎಸ್‌. ಕುಮಾರ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ. ಹೆಗಡೆ, ಬೆಟ್ಟಂಪಾಡಿ ಗ್ರಾ.ಪಂ. ಪಿಡಿಒ ಶೈಲಜಾ ಹಾಗೂ ತಾ.ಪಂ. ಸಿಬಂದಿ ಉಪಸ್ಥಿತರಿದ್ದರು. ತಾ.ಪಂ.ನ ಶಿವಪ್ರಕಾಶ್‌ ಸ್ವಾಗತಿಸಿ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ನವೀನ್‌ ಭಂಡಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next