Advertisement

ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ಧತಿಯಿಂದ ದೇಶಕ್ಕೆ ಮತ್ತೊಮ್ಮೆ ಸ್ವಾತಂತ್ರ್ಯ

10:32 AM Aug 23, 2019 | keerthan |

ಚಿಕ್ಕಬಳ್ಳಾಪುರ: ಜಮ್ಮು ಕಾಶ್ಮೀರಕ್ಕೆ ಇದ್ದ ಪ್ರತ್ಯೇಕ ಸ್ಥಾನಮಾನ ರದ್ದತಿಯಿಂದ ದೇಶಕ್ಕೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತೊಂದು ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ತಿಳಿಸಿದರು.

Advertisement

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಮೀಪ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಕಲ್ಪಿಸುವ 370 ನೇ ವಿಧಿ ಹಾಗೂ 35 ಎ ವಿಧಿ ರದ್ದುಗೊಳಿಸಿರುವುದು ಐತಿಹಾಸಿಕವಾದ ನಿರ್ಧಾರ. ಇದರಿಂದ ದೇಶದ ಸ್ವಾತಂತ್ರ್ಯದ ಪಡೆದ ಬಳಿಕ ಹುಟ್ಟಿದವರಿಗೆ ಪ್ರದಾನಿ ಮೋದಿ ಮತ್ತೊಂದು ಸ್ವಾತಂತ್ರ ತಂದು ಕೊಟ್ಟಿದ್ದಾರೆಂದರು. ದೇಶದಲ್ಲಿ ಬಿಜೆಪಿ 14 ಕೋಟಿ ಸದಸ್ಯತ್ವವನ್ನು ಹೊಂದಿದ ಏಕೈಕ ರಾಜಕೀಯ ಪಕ್ಷವಾಗಿದೆ. ಮೂರು ತಿಂಗಳಲ್ಲಿ ಮೂರು ಕೋಟಿ ಹೊಸ ಸದಸ್ಯರು ದೇಶದಲ್ಲಿ ಬಿಜೆಪಿ ಹೊಸಬರು ಸದಸ್ಯರಾಗಿದ್ದಾರೆ ಎಂದರು. ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಸದಸ್ಯತ್ವ ಅಭಿಯಾನಕ್ಕೆ ಸ್ಪಂದನೆ ಸಿಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಹನುಮಂತಪ್ಪ, ರಾಮಣ್ಣ, ಚಂದ್ರಶೇಖರ್,ಲಕ್ಮಿಪತಿ, ಲಕ್ಮಿನಾರಾಯಣ ಗುಪ್ತ, ಮಂಜುನಾಥ, ಕಿರಣ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next