Advertisement

ಭಾರತವನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೂ ಕ್ಷಿಪಣಿ ದಾಳಿ ನಡೆಸಲಾಗುವುದು: ಪಾಕಿಸ್ಥಾನ ಸಚಿವ

09:48 AM Nov 01, 2019 | Team Udayavani |

ಇಸ್ಲಾಮಾಬಾದ್: ಯಾವುದೇ ದೇಶ ಕಾಶ್ಮೀರದ ವಿಷಯವಾಗಿ ಭಾರತವನ್ನು ಬೆಂಬಲಿಸಿದರೆ ಅದರ ಮೆಲೆ ಕ್ಷಿಪಣಿ ದಾಳಿ ನಡೆಸಲಾಗುವುದು ಮತ್ತು ಅದನ್ನು ಪಾಕಿಸ್ಥಾನದ ಶತ್ರು ಎಂದು ಪರಿಗಣಿಸಲಾಗುವುದು ಎಂದು ಪಾಕಿಸ್ಥಾನದ ಸಚಿವ ಆಲಿ ಅಮೀನ್  ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಭಾರತ-ಪಾಕಿಸ್ಥಾನದ ನಡುವೆ ಕಾಶ್ಮೀರದ ವಿಷಯದಲ್ಲಿ ಉದ್ವಿಗ್ನತೆ ಹೆಚ್ಚಾದರೆ ಅನಿವಾರ್ಯವಾಗಿ ಯುದ್ದ ಮಾಡಬೇಕಾಗುತ್ತದೆ. ಹಾಗೆಯೇ ಭಾರತವನ್ನು ಬೆಂಬಲಿಸುವ ದೇಶಗಳು ನಮ್ಮ ಶತ್ರುವಾಗಿ ಬದಲಾಗುತ್ತದೆ. ಆ ಕಾರಣದಿಂದ ಬಾರತವನ್ನು ಬೆಂಬಲಿಸುವ ದೇಶಗಳ ಮೇಲೂ ಕ್ಷಿಪಣಿ ಹಾರಿಸಬೇಕಾಗುತ್ತದೆ ಎಂದು ಕಾಶ್ಮೀರ ವ್ಯವಹಾರಗಳ ಸಚಿವ ಗಿಲ್ಗಿತ್ ಬಾಲ್ಟಿಸ್ಥಾನ್ ಅಲಿ ಅಮೀನ್ ಗಂಡಾಪುರ ಹೇಳಿದ್ದಾರೆ.

ಪಾಕಿಸ್ಥಾನ ಮೂಲದ ಪತ್ರೆಕರ್ತೆಯೊಬ್ಬರು ಈ ವಿಡಿಯೋವನ್ನು ಟ್ಟಿಟ್ಟರ್ ನಲ್ಲಿ ಹಂಚಿಕೊಂಡಿದ್ದು ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಭಾರತವು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ 370 ನೇ ವಿಧಿಯನ್ನು ರದ್ದು ಮಾಡಿದ ನಂತರ ಪಾಕಿಸ್ಥಾನವು ಜಾಗತಿಕವಾಗಿ ಭಾರತವನ್ನು ದೂಷಿಸುತ್ತಾ ಬರುತ್ತಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next