Advertisement

Counting; ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪೊಲೀಸರ ವಾಗ್ವಾದ

08:42 AM Jun 04, 2024 | Vishnudas Patil |

ವಿಜಯಪುರ : ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಚಾಲನೆ ನೀಡಲು ಮತ ಯಂತ್ರಗಳಿರುವ ಸ್ಟ್ರಾಂಗ್ ರೂಮ್ ತೆರೆಯಲಾಗಿದೆ.ನಗರದ ಸೈನಿಕ ಶಾಲೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕೇಂದ್ರ ತೆರೆಯಲಾಗಿದ್ದು, ಸಶಸ್ತ್ರ ಪಡೆಗಳ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗಿರುವ ಮತ ಯಂತ್ರಗಳನ್ನು ತೆರೆಯಲಾಯಿತು.ಜಿಲ್ಲಾ ಚುನಾವಣಾ ಅಧಿಕಾರಿ ಭೂಬಾಲನ್ ಕ್ಷೇತ್ರದ ಸ್ಪರ್ಧಾ ಅಭ್ಯರ್ಥಿಗಳು ಹಾಗೂ ಚುನಾವಣಾ ಮತ ಎಣಿಕೆ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಯಿತು.

Advertisement

ಸ್ಟ್ರಾಂಗ್ ರೂಮ್ ತೆರೆಯುವ ವಿಡಿಯೋ, ಫೋಟೋ ತೆಗೆಯಲು ಮುಂದಾದ ಮಾಧ್ಯಮಗಳ ಪ್ರತಿನಿಧಿಗಳು, ವಿಡಿಯೋ- ಫೋಟೋ ಜರ್ನಲಿಸ್ಟ್ ಗಳನ್ನು ಒಳಗೆ ಪ್ರವೇಶ ಕಲ್ಪಿಸದೇ ಪೊಲೀಸರು ತಕರರಾರು ಮಾಡಿದರು.

ಅಧಿಕೃತ ಪಾಸ್ ಇರುವ ಮಾಧ್ಯಮಗಳ ಪ್ರತಿನಿಧಿಗಳನ್ನು ಒಳಗೆ ಬಿಡದ ಪೊಲೀಸರ ವರ್ತನೆಯನ್ನು ಕರ್ತವ್ಯ ನಿರತ ಪತ್ರಕರ್ತರು ಆಕ್ಷೇಪಿಸಿದರು. ಈ ಹಂತದಲ್ಲಿ ಪೊಲೀಸರು ಪತ್ರಕರ್ತರು ಹಾಗೂ ವಿಡಿಯೋ, ಫೋಟೋ ಜರ್ನಲಿಸ್ಟ್ ಗಳನ್ನು ತಳ್ಳಿದ್ದು, ಕೆಲಕಾಲ ವಾಗ್ವಾದ ನಡೆಯಿತು.

ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಚುನಾವಣ ಅಧಿಕಾರಿ ಭೂಬಾಲನ್ ಪರಿಸ್ಥಿತಿ ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next