Advertisement
ಒಮ್ಮೆ ಡೆನ್ಸಿಗ್ ತರಗತಿಗೆ ಬರುವಾಗ ಸ್ವಲ್ಪ ತಡವಾಯಿತು. ಕ್ಷಮೆ ಕೇಳಿ ಒಳ ಬಂದ ಕೂತವರೇ, ಪ್ರಾಧ್ಯಾಪಕರು ಅದಾಗಲೇ ಬೋರ್ಡಿನ ಮೇಲೆ ಬರೆದಿದ್ದ ಮೂರು ಪ್ರಶ್ನೆಗಳನ್ನು ಕಾಪಿ ಮಾಡಿಕೊಂಡರು. ಪ್ರತಿ ಸಲವೂ ಲೆಕ್ಕ ಕೊಟ್ಟ ಮರುತಿನವೇ ಉತ್ತರ ಒಪ್ಪಿಸುತ್ತಿದ್ದ ಡೆನ್ಸಿಗ್ ಅವರಿಗೆ ಈ ಸಲ ಮಾತ್ರ ಆ ಮೂರು ಪ್ರಶ್ನೆಗಳನ್ನು ಬಿಡಿಸಲು ಸ್ವಲ್ಪ ಕಷ್ಟವೇ ಆಯಿತು. ತಾನು ಕ್ಲಾಸಿಗೆ ತಡವಾಗಿ ಹೋಗಿ ಬಹುಶಃ ಅತ್ಯಂತ ಮುಖ್ಯ ಪಾಠವನ್ನೇ ತಪ್ಪಿಸಿಕೊಂಡೆನೋ ಏನೋ ಎಂದು ಅವರು ಭಾವಿಸಿದ್ದರು. ಆ ಪಾಪ ಪ್ರಜ್ಞೆ ಕಾಡುತ್ತಿದ್ದುದರಿಂದ ಅವರು ಪ್ರೊಫೆಸರನ್ನು ಭೇಟಿಯಾಗಿ ಕೇಳಲೂ ಇಲ್ಲ. ನಾಲ್ಕು ದಿನವಾದ ಮೇಲೆ ಹೇಗೋ ಕಷ್ಟ ಪಟ್ಟು ಉತ್ತರ ಬರೆಯುವುದಕ್ಕೆ ಸಾಧ್ಯವಾಯಿತು. ತಮ್ಮ ಉತ್ತರಗಳನ್ನು ಹಿಡಿದುಕೊಂಡು ಪ್ರಾಧ್ಯಾಪಕರ ಕೊಠಡಿಗೆ ತಪ್ಪಿತಸ್ಥನಂತೆ ಹೋದರು. “ಕ್ಷಮಿಸಿ,ಈ ಸಲ ಯಾಕೋ ಪ್ರಶ್ನೆಗಳು ಸ್ವಲ್ಪ ಕಠಿಣವೆನ್ನಿಸಿದವು. ಹಾಗಾಗಿ, ಬಿಡಿಸಲು ನಾಲ್ಕು ದಿನ ಬೇಕಾಯಿತು’ ಎಂದು ಹೇಳುತ್ತ ತನ್ನ ಉತ್ತರವನ್ನು ಪ್ರಾಧ್ಯಾಪಕರ ಮುಂದೆ ಹಿಡಿದರು. ಈಗ ಹುಬ್ಬೆತ್ತರಿಸಿ ಮೂಛೆì ತಪ್ಪುವ ಸರದಿ ಪ್ರಾಧ್ಯಾಪಕರದು. ” ಇದು ಹೇಗೆ ಸಾಧ್ಯ! ನಾನು ಅಂದು ಬರೆದಿದ್ದದ್ದು ಇದುವರೆಗೆ ಯಾವ ಗಣಿತಜ್ಞನನಿಗೂ ಪರಿಹರಿಸಲಾಗದಿದ್ದ ಮೂರು ಪ್ರಶ್ನೆಗೆಗಳನ್ನು ‘ ಎಂದರು ಅವರು.
Advertisement
ತಡವಾಗಿ ಮಾಡಿದ ಮನೆ ಲೆಕ್ಕ
06:00 PM Mar 09, 2020 | Sriram |
Advertisement
Udayavani is now on Telegram. Click here to join our channel and stay updated with the latest news.