Advertisement

ನಕಲಿ ನೋಟು: ಅಪರಾಧಿಗೆ ಜೀವಾವಧಿ

11:52 PM May 07, 2023 | Team Udayavani |

ಭೋಪಾಲ್‌: ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ, ಅವುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡಿರುವ ಅಪರಾಧದ ಮೇರೆಗೆ ಮಧ್ಯಪ್ರದೇಶದ ಇಂದೋರ್‌ನ ನ್ಯಾಯಾಲಯವೊಂದು 26 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 4ನೇ ಹೆಚ್ಚುವರಿ ಸೆಷನ್‌ ನ್ಯಾಯಾ ಧೀಶರಾದ ಜಯದೀಪ್‌ ಸಿಂಗ್‌ ಅವರ ನ್ಯಾಯಪೀಠವು ಶನಿವಾರ ರಾಜರತನ್‌ ಎಂಬ ಅಪರಾಧಿಗೆ ಶಿಕ್ಷೆ ವಿಧಿಸಿದ್ದು, ನ್ಯಾಯಾಲಯದ ಆದೇಶದ ಪ್ರಕಾರ ಪೊಲೀ ಸರು ಅಪರಾಧಿಯನ್ನು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. 2021ರ ಜೂನ್‌ 9ರಂದು ಇಂದೋರ್‌ ಕ್ರೈಂ ಬ್ರ್ಯಾಂಚ್‌ ತಂಡ ಹಾಗೂ ಅಜಾದ್‌ ನಗರದ ಪೊಲೀಸರ ತಂಡ ಭಂಡಾರಿ ಬ್ರಿಡ್ಜ್ನ ಬಳಿ ರಾಜರತನ್‌ನನ್ನು ಬಂಧಿಸಿತ್ತು. ಅಲ್ಲದೇ ಆತನಿಂದ 2.53 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳಿದ್ದ ಬ್ಯಾಗ್‌ ಅನ್ನು ವಶಪಡಿಸಿಕೊಳ್ಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next