Advertisement

ಉಪನಗರ ರೈಲು ಸಂಚಾರಕ್ಕೆ ಕ್ಷಣಗಣನೆ

01:03 PM Jan 03, 2021 | Team Udayavani |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ರೈಲು ಸಂಪರ್ಕ ಕಲ್ಪಿಸುವ ದಶಕದ ಕನಸು ನನಸಾಗಲು ಈಗ ಕ್ಷಣಗಣನೆ ಆರಂಭವಾಗಿದೆ.

Advertisement

ಈ ಮಾರ್ಗದ ನಡುವೆ ರೈಲು ಸೇವೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸೋಮ ವಾರಬೆಳಗಿನ ಜಾವ 4.45ಕ್ಕೆ ನಗರದ ಹೃದಯಭಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ(ಕೆಎಸ್‌ಆರ್‌)ದಿಂದ ಮೊದಲ ಉಪನಗರ ರೈಲುವಿಮಾನ ನಿಲ್ದಾಣದ ಕಡೆಗೆ ಹೊರಡಲಿದೆ. ಇದರೊಂದಿಗೆ ಅತ್ಯಂತ ಅಗ್ಗದ ದರದಲ್ಲಿಸಂಚಾರದಟ್ಟಣೆ ಇಲ್ಲದೆ, ಕೇವಲ 1 ಗಂಟೆಯಲ್ಲಿ ಮೆಜೆಸ್ಟಿಕ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣ ದೇವನಹಳ್ಳಿ (ಕೆಐಎಡಿ) ತಲುಪಲಿದ್ದಾರೆ.ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ತಡೆರಹಿತ ಸೇವೆ ಪರಿಚಯಿಸುವ ಚಿಂತನೆ ಇದ್ದು, ಪ್ರಯಾಣ ಅವಧಿ ಕೇವಲ ಅರ್ಧಗಂಟೆ ಆಗಲಿದೆ.

ವೇಳಾಪಟ್ಟಿ ಪ್ರಕಾರ ಬೆಂ.ನಗರ- ಏರ್‌ಪೋರ್ಟ್‌ ನಡುವೆಯೇ ವಿಶೇಷವಾಗಿ 3 ಜೋಡಿ ಡೆಮು ರೈಲು ಪರಿಚಯಿಸಲಾಗಿದೆ. ವಾರದಲ್ಲಿ 6 ದಿನ (ಭಾನುವಾರ ಹೊರತುಪಡಿಸಿ) ಈ ಸೇವೆ ಇರಲಿದೆ. 2 ಜೋಡಿ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ-ಕೆಐಎಎಲ್‌,

ಮತ್ತೂಂದು ಜೋಡಿ ರೈಲು ಯಶವಂತ ಪುರ- ಕೆಐಎಎಲ್‌ ಮಧ್ಯೆ ಕಾರ್ಯಾಚರಣೆ ಮಾಡಲಿವೆ. ಜತೆಗೆ ಬಂಗಾರಪೇಟೆಗೆ ತೆರಳುವ 2 ಡೆಮು ರೈಲುಗಳೂ ಸೋಮವಾರದಿಂದ ಕಾರ್ಯಾರಂಭ ಮಾಡಲಿದ್ದು, ಇದೇ ಮಾರ್ಗದಿಂದ ಹಾದು ಹೋಗಲಿವೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

8 ಬೋಗಿ: ಒಟ್ಟಾರೆ 8 ಬೋಗಿಗಳ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಇವು ಒಟ್ಟಾರೆ 2,402 ಪ್ರಯಾಣಿಕರನ್ನು ಕೊಂಡೊಯ್ಯಲಿವೆ. ರೈಲಿನಪ್ರತಿ ಬೋಗಿ 84 ಆಸನ ಸೇರಿ 325 ಪ್ರಯಾಣಿಕರಸಾಮರ್ಥ್ಯ ಹೊಂದಿವೆ. ಮೋಟಾರು ಕಾರುಗಳ ಸಾಮರ್ಥ್ಯ 55 ಆಸನ ಸೇರಿ 226 ಆಗಿರುತ್ತದೆ.

Advertisement

ಬಿಎಂಟಿಸಿ ಸೇವೆ ವೃದ್ಧಿಸಲು ಅವಕಾಶ :

ರೈಲು ಸೇವೆ ಬೆನ್ನಲ್ಲೇ ಬಿಎಂಟಿಸಿಗೂ ತನ್ನ ಬಸ್‌ ಸೇವೆ ವೃದ್ಧಿಸಲು ಅವಕಾಶ ತೆರೆದುಕೊಂಡಂತಾಗಿದೆ. ರೈಲು ನಿಲುಗಡೆ ಹಿನ್ನೆಲೆ ಸುತ್ತಲಿನಿಂದ ಹಾಲ್ಟ್ ಸ್ಟೇಷನ್‌ಗೆ ಬರುವಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಇದಕ್ಕೆ ಪೂರಕವಾಗಿಬಾಗಲೂರು, ಏರೋಸ್ಪೇಸ್‌ ಪಾರ್ಕ್‌, ಮೈಲನಹಳ್ಳಿ,ಕಾರ್ಗೊ ಏರ್‌ಪೋರ್ಟ್‌, ಹಾಲ್ಟ್ ಸ್ಟೇಷನ್‌ ಮಾರ್ಗಗಳಲ್ಲಿಬಿಎಂಟಿಸಿ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಬಸ್‌ಪರಿಚಯಿಸಬಹುದು. ಸದ್ಯ ಬಸ್‌ ಸೇವೆಗಳು ಆಯಾಸೀಮಿತ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಪ್ರಸ್ತುತ ಚಿಕ್ಕಬಳ್ಳಾಪುರ, ಕೋಲಾರಕ್ಕೆ ತೆರಳುವರುದೊಡ್ಡಜಾಲಕ್ಕೆ ತೆರಳಿ, ಅಲ್ಲಿಂದ ರೈಲು ಹತ್ತುತ್ತಿದ್ದಾರೆ. ಇದುದೂರ (ಬಾಗಲೂರು-ದೊಡ್ಡಜಾಲ 14 ಕಿ.ಮೀ.) ಹಾಗೂರಸ್ತೆಯೂ ಸರಿಯಾಗಿಲ್ಲ. ಬಸ್‌ ಸೇವೆ ಸಿಕ್ಕರೆ, ನೇರವಾಗಿಹಾಲ್ಟ್ಸ್ಟೇಷನ್‌ಗೆ ಬರಬಹುದು. ಅದೇ ರೀತಿ, ಕಾರ್ಗೊ ಏರ್‌ಪೋರ್ಟ್‌, ಏರೋಸ್ಪೇಸ್‌ ಪಾರ್ಕ್‌ಗೆ ಕೆಲಸಕ್ಕೆ ಬರುವಪ್ರಯಾಣಿಕರಿಗೂ ಅನುಕೂಲ ಆಗಲಿದೆ ಎಂದುಉಪನಗರ ರೈಲು ತಜ್ಞ ಸಂಜೀವ್‌ ದ್ಯಾಮಣ್ಣವರ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next