Advertisement

Gruha Jyothi Scheme ಚಾಲನೆಗೆ ಕ್ಷಣಗಣೆ: ಊಟದ ಮೆನುವಿನಲ್ಲಿ ಲಡ್ಡು- ಪಲಾವ್

11:52 AM Aug 05, 2023 | Team Udayavani |

ಕಲಬುರಗಿ: ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಚಾಲನೆಗೆ ಕ್ಷಣ ಗಣನೆ ಶುರುವಾಗಿದೆ.

Advertisement

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಊಟ ಮಾಡಿಕೊಂಡು ಕಾರ್ಯಕ್ರಮದಲ್ಲಿ ಹಾಕಲಾಗಿರುವ ಕುರ್ಚಿಗಳಲ್ಲಿ ಆಸೀನರಾಗುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ವಿಶೇಷ ವಿಮಾನ ಮೂಲಕ ನವದೆಹಲಿಯಿಂದ ನೇರವಾಗಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ 11.40 ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಸಿಎಂ ಆದ ನಂತರ ಪ್ರಥಮ ಬಾರಿಗೆ ಆಗಮಿಸಿದ್ದರಿಂದ ಮುಖಂಡರು, ಕಾರ್ಯಕರ್ತರು ಅದ್ದೂರಿಯಿಂದ ಸ್ವಾಗತಿಸಿಕೊಂಡರು.‌

ಸಾರ್ವಜನಿಕರ ಊಟಕ್ಕೆ ಲಡ್ಡು, ಪಲಾವ್ ವ್ಯವಸ್ಥೆ, ಶುಚಿತ್ವಕ್ಕೆ ಆದ್ಯತೆ:  ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅಲ್ಲದೆ ರಾಜ್ಯ ಸಚಿವ ಸಂಪುಟದ ಸಪ್ತ ಸಚಿವರು ಇಂದು ಕಲಬುರಗಿಯ ಎನ್.ವಿ‌.ಮೈದಾನದಲ್ಲಿ ಆಯೋಜಿಸಲಾಗಿರುವ “ಗೃಹ ಜ್ಯೋತಿ” ಚಾಲನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು, ಫಲಾನುಭವಿಗಳಿಗೆ ನಗರದ ಎನ್.ವಿ.ಮೈದಾನದಲ್ಲಿ ಊಟಕ್ಕೆ ಸಕಲ ವ್ಯವಸ್ಥೆ ಮಾಡಿದ್ದು, ಸರತಿಯಲ್ಲಿ ನಿಂತು ಸಾರ್ವಜನಿಕರು ಊಟ ಸವಿದರು.

ಮಹಿಳೆಯರು ಮತ್ತು ಪರುಷರು ತಂಡಗಳು ಎನ.ವಿ.ಮೈದಾನದತ್ತ ಧಾವಿಸುತ್ತಿವೆ. ತಂಡೋಪವಾಗಿ ಊಟ ಸವಿಯುತ್ತಿರುವ ಚಿತ್ರ ಸಾಮಾನ್ಯವಾಗಿವೆ.

ಊಟಕ್ಕೆ ಲಡ್ಡು, ಪಲಾವ್, ಸಾಂಬಾರ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜನಸಂದಣಿ ಆಗದಂತೆ ಹತ್ತಾರು ಕೌಂಟರ್ ಸ್ಥಾಪಿಸಲಾಗಿದೆ, ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಸ್ವಚ್ಛತಾ ವಾಹಿನಿಗಳು ನಿರಂತರ ಸ್ವಚ್ಚತಾ ಕಾರ್ಯದಲ್ಲಿ ತೊಡಗಿವೆ. ಒಟ್ಟಾರೆಯಾಗಿ ಊಟದ ಸ್ಥಳದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಅದ್ಯತೆ ನೀಡಿರುವುದು ಇಲ್ಲಿ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next